ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನಂದರೆ -- ನೀವು ಕೇಳುತ್ತೀರಿ, ಕೇಳಿದರೂ ತಿಳು ಕೊಳ್ಳುವದೇ ಇಲ್ಲ; ಮತ್ತು ನೋಡುತ್ತೀರಿ, ನೋಡಿ ದರೂ ಗ್ರಹಿಸುವದೇ ಇಲ್ಲ.
Cross references
ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು.
ಮನುಷ್ಯಪುತ್ರನೇ, ನೀನು ತಿರುಗಿ ಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವಿ, ಅವರಿಗೆ ನೋಡುವದಕ್ಕೆ ಕಣ್ಣು ಗಳುಂಟು ನೋಡುವದಿಲ್ಲ, ಕೇಳುವದಕ್ಕೆ ಕಿವಿಗಳುಂಟು ಕೇಳುವದಿಲ್ಲ; ಅವರು ತಿರುಗಿ ಬೀಳುವ ಮನೆತನ ದವರು.
ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.
ಅದಕ್ಕೆ ಆತನು--ದೇವರರಾಜ್ಯದ ಮರ್ಮಗಳನ್ನು ತಿಳುಕೊಳ್ಳುವದಕ್ಕೆ ನಿಮಗೆ ಕೊಡ ಲ್ಪಟ್ಟಿದೆ. ಆದರೆ ಉಳಿದವರಿಗೆ ಅವರು ನೋಡಿದರೂ ಕಾಣದಂತೆ ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯ ಗಳಲ್ಲಿ ಕೊಡಲ್ಪಟ್ಟಿದೆ.
ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ--
ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ--ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ--
(ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ.
ಆದರೆ ಅವರ ಬುದ್ದಿಮಂದವಾಯಿತು, ಆ ಮುಸುಕು ಕ್ರಿಸ್ತನಲ್ಲಿ ತೆಗೆದು ಹಾಕಲ್ಪಟ್ಟಿರುವದರಿಂದ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗೆಲ್ಲಾ ಈ ದಿನದ ವರೆಗೂ ಅವರಿಗೆ ಆ ಮುಸುಕು ತೆಗೆಯಲ್ಪಡದೆ ಉಳಿದಿದೆ.