ಆತನು ಇನ್ನೂ ಜನರ ಸಂಗಡ ಮಾತನಾಡು ತ್ತಿದ್ದಾಗ ಇಗೋ, ಆತನ ತಾಯಿಯೂ ಆತನ ಸಹೋದರರೂ ಆತನೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
Cross references
ಯೇಸು ಕ್ರಿಸ್ತನ ಜನನವು ಹೀಗಾಯಿತು: ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು.
ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು.
ಅವರು ಹೋದಮೇಲೆ ಇಗೋ, ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು
ಎದ್ದು ಶಿಶುವನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಯಾಕಂದರೆ ಶಿಶುವಿನ ಪ್ರಾಣವನ್ನು ತೆಗೆಯಬೇಕೆಂದು ಹುಡುಕುವವರು ಸತ್ತುಹೋದರು ಎಂದು ಹೇಳಿದನು.
ಈತನು ಬಡಗಿ ಯ ಮಗನಲ್ಲವೇ? ಮರಿಯಳೆಂದು ಕರೆಯಲ್ಪಡು ವವಳು ಈತನ ತಾಯಿಯಲ್ಲವೇ? ಮತ್ತು ಯಾಕೋಬ, ಯೋಸೇಫ, ಸೀಮೋನ, ಯೂದ ಈತನ ಸಹೋದರ ರಲ್ಲವೇ?
ಇದಲ್ಲದೆ ಹೊಸಬಟ್ಟೆಯ ತುಂಡನ್ನು ಹಳೆಯ ಉಡುಪಿಗೆ ಯಾರೂ ಹಚ್ಚುವದಿಲ್ಲ;ಹಚ್ಚಿದರೆ ಹೊಸ ತುಂಡು ಹಳೆಯ ಉಡುಪನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು.
ತರುವಾಯ ಆತನ ಸಹೋದರರೂ ತಾಯಿಯೂ ಅಲ್ಲಿಗೆ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇಕಳುಹಿಸಿದರು.
ಮರಿಯಳ ಮಗನೂ ಯಾಕೋಬ, ಯೋಸೆ ಯೂದ ಸೀಮೋನ ಇವರ ಸಹೋದರನೂ ಆದ ಈತನು ಬಡಗಿಯಲ್ಲವೇ? ಈತನ ಸಹೋದರಿ ಯರು ಇಲ್ಲಿಯೇ ನಮ್ಮ ಜೊತೆಯಲ್ಲಿ ಇದ್ದಾರಲ್ಲವೇ ಎಂದು ಹೇಳಿ ಆತನ ವಿಷಯದಲ್ಲಿ ಅಭ್ಯಂತರಪಟ್ಟರು.
ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವದು ನನಗೆಲ್ಲಿಂದಾಯಿತು?
ಆಗ ಅವನು ಹೇಳಿದ ಮಾತುಗಳಿಗಾಗಿ ಯೋಸೇಫನೂ ಆತನ ತಾಯಿಯೂ ಆಶ್ಚರ್ಯಪಟ್ಟರು.
ಅವರು (ತಂದೆ ತಾಯಿಗಳು) ಆತನನ್ನು ನೋಡಿದಾಗ ಆಶ್ಚರ್ಯಪಟ್ಟರು; ಆಗ ಆತನ ತಾಯಿಯು ಆತನಿಗೆ--ಮಗನೇ, ನೀನು ನಮಗೆ ಹೀಗೇಕೆ ಮಾಡಿದಿ? ಇಗೋ, ನಿನ್ನ ತಂದೆಯೂ ನಾನೂ ವ್ಯಥೆಯಿಂದ ನಿನ್ನನ್ನು ಹುಡುಕಿದೆವು ಅಂದಳು.
ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆದರೆ ಆತನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಹೃದಯದಲ್ಲಿ ಇಟ್ಟುಕೊಂಡಳು.ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು.
ಅದಕ್ಕೆ ಆತನು--ದೇವರರಾಜ್ಯದ ಮರ್ಮಗಳನ್ನು ತಿಳುಕೊಳ್ಳುವದಕ್ಕೆ ನಿಮಗೆ ಕೊಡ ಲ್ಪಟ್ಟಿದೆ. ಆದರೆ ಉಳಿದವರಿಗೆ ಅವರು ನೋಡಿದರೂ ಕಾಣದಂತೆ ಮತ್ತು ಕೇಳಿದರೂ ಗ್ರಹಿಸದಂತೆ ಸಾಮ್ಯ ಗಳಲ್ಲಿ ಕೊಡಲ್ಪಟ್ಟಿದೆ.
ತರುವಾಯ ಆತನ ತಾಯಿಯೂ ಆತನ ಸಹೋದರರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು.
ಮೂರನೆಯ ದಿನದಲ್ಲಿ ಗಲಿಲಾಯದ ಕಾನಾದಲ್ಲಿ ಒಂದು ಮದುವೆ ಆಯಿತು. ಅಲ್ಲಿ ಯೇಸುವಿನ ತಾಯಿಯು ಇದ್ದಳು.
ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು.
ಇದಾದ ಮೇಲೆ ಆತನೂ ಆತನ ತಾಯಿಯೂ ಆತನ ಸಹೋದರರೂ ಆತನ ಶಿಷ್ಯರೂ ಕಪೆರ್ನೌಮಿಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು.
ಆದದರಿಂದ ಆತನ ಸಹೋದರರು ಆತನಿಗೆ--ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು;
ಯಾಕಂದರೆ ಆತನ ಸಹೋದರರು ಸಹ ಆತನ ಮೇಲೆ ನಂಬಿಕೆ ಇಟ್ಟಿರಲಿಲ್ಲ.
ಆದರೆ ಆತನ ಸಹೋದರರು ಹೋದಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ ಗುಪ್ತವಾಗಿ ಹೋದನು.
ಆಗ ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ಸಹೋದರಿಯೂ ಕ್ಲೋಫನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.
ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆ ವಿಜ್ಞಾ ಪನೆಗಳಲ್ಲಿ ನಿರತರಾಗಿದ್ದರು. ಅವರೊಂದಿಗೆ ಸ್ತ್ರೀಯರೂ ಯೇಸುವಿನ ತಾಯಿಯಾದ ಮರಿಯಳೂ ಆತನ ಸಹೋದರರೂ ಇದ್ದರು.
ಸಹೋದರಿಯಾಗಿ ರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ ಕರ್ತನ ಸಹೋದರ ರಂತೆಯೂ ಕೇಫನಂತೆಯೂ ನಮಗೆ ಅಧಿಕಾರ ವಿಲ್ಲವೇ?
ಆದರೆ ಕರ್ತನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.