ಆಗ ಶಾಸ್ತ್ರಿಗಳಲ್ಲಿ ಮತ್ತು ಫರಿಸಾಯರಲ್ಲಿ ಕೆಲ ವರು--ಗುರುವೇ, ನಿನ್ನಿಂದ ಒಂದು ಸೂಚಕಕಾರ್ಯ ವನ್ನು ನೋಡಬೇಕೆಂದಿದ್ದೇವೆ ಎಂದು ಕೇಳಿದ್ದಕ್ಕೆ
Cross references
ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಆತನನ್ನು ಶೋಧಿಸುವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಅಪೇಕ್ಷಿಸಿದರು.
ಆಗ ಫರಿಸಾಯರು ಬಂದು ಆತನನ್ನು ಶೋಧಿಸು ವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಆತನೊಂದಿಗೆ ತರ್ಕಿಸುವದಕ್ಕೆ ಆರಂಭಿಸಿದರು.
ಬೇರೆಯವರು ಆತನನ್ನು ಶೋಧಿಸುವವ ರಾಗಿ ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ತೋರಿಸುವಂತೆ ಆತನನ್ನು ಕೇಳಿದರು.
ಜನರು ಗುಂಪುಗುಂಪಾಗಿ ಕೂಡಿ ಬಂದಿದ್ದಾಗ ಆತನು--ಇದು ದುಷ್ಟಸಂತತಿಯು; ಇದು ಸೂಚಕ ಕಾರ್ಯವನ್ನು ಹುಡುಕುತ್ತದೆ. ಪ್ರವಾದಿಯಾದ ಯೋನ ನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡ ಲಾರದು.
ಆಗ ಯೆಹೂದ್ಯರು ಆತನಿಗೆ--ನೀನು ಇವುಗಳನ್ನು ಮಾಡುವದಕ್ಕೆ ಯಾವ ಸೂಚಕಕಾರ್ಯ ವನ್ನು ನಮಗೆ ತೋರಿಸುತ್ತೀ ಎಂದು ಕೇಳಿದರು.
ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು.
ಅದಕ್ಕೆ ಅವರು ಆತನಿಗೆ--ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕ ಕಾರ್ಯವನ್ನು ನಮಗೆ ತೋರಿಸುತ್ತೀ? ನೀನು ಯಾವ ಕ್ರಿಯೆಯನ್ನು ಮಾಡುತ್ತೀ?
ಯೆಹೂದ್ಯರು ಸೂಚಕಕಾರ್ಯವನ್ನು ಕೇಳುತ್ತಾರೆ; ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ;