Home Bibles ☰ Books ಮತ್ತಾಯ 11:9 · ಕನ್ನಡ ಬೈಬಲ್
ಮತ್ತಾಯ 11:9 · ಕನ್ನಡ ಬೈಬಲ್

ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.

Cross references

ಮತ್ತಾಯ 11:13

ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು.

ಮತ್ತಾಯ 14:5

ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.

ಮತ್ತಾಯ 17:12

ಆದರೆ ಎಲೀಯನು ಆಗಲೇ ಬಂದನು. ಮತ್ತು ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಕುಮಾರ ನು ಸಹ ಅವರಿಂದ ಶ್ರಮೆಯನ್ನು ಅನುಭವಿಸುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಮತ್ತಾಯ 21:24

ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ವಿಷಯ ನಿಮ್ಮನ್ನು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇ ನೆಂದು ನಿಮಗೆ ಹೇಳುವೆನು ಎಂದು ಹೇಳಿ--ಯೋಹಾನನ ಬಾಪ್ತಿಸ್ಮವು ಎಲ್ಲಿಂದ ಬಂತು?

ಮಾರ್ಕ 9:11

ಇದಲ್ಲದೆ ಅವರು ಆತನಿಗೆ--ಎಲೀಯನು ಮೊದಲು ಬರುವದು ಅಗತ್ಯವೆಂದು ಶಾಸ್ತ್ರಿಗಳು ಯಾಕೆ ಹೇಳುತ್ತಾರೆ ಎಂದು ಕೇಳಿದರು.

ಲೂಕ 1:15

ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.

ಲೂಕ 1:76

ಇದಲ್ಲದೆ ಮಗುವೇ, ನೀನಾದರೋ ಮಹೋನ್ನತನ ಪ್ರವಾದಿ ಎಂದು ಕರೆಯಲ್ಪಡುವಿ; ಯಾಕಂದರೆ ಕರ್ತನ ಮಾರ್ಗಗಳನ್ನು ಸಿದ್ಧಮಾಡು ವದಕ್ಕೆ ಆತನ ಮುಂದೆ ಹೋಗುವಿ.

Interlinear

Choose Theme