ಗುರುವಿಗಿಂತ ಶಿಷ್ಯನು ಹೆಚ್ಚಿನವನಲ್ಲ; ಇಲ್ಲವೆ ಸೇವಕನು ತನ್ನ ಯಜಮಾನನಿಗಿಂತ ಹೆಚ್ಚಿನವನಲ್ಲ.
Cross references
ಊರೀಯನು ದಾವೀದ ನಿಗೆ--ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ ದವರೂ ಡೇರೆಗಳಲ್ಲಿ ವಾಸಿಸಿರುವಾಗಲೂ ನನ್ನ ಒಡೆಯನಾದ ಯೋವಾಬನೂ ನನ್ನ ಒಡೆಯನ ಸೇವ ಕರೂ ಬೈಲಿನಲ್ಲಿ ದಂಡಿಳಿದಿರುವಾಗ ನಾನು ಉಣ್ಣುವ ದಕ್ಕೂ ಕುಡಿಯುವದಕ್ಕೂ ನನ್ನ ಹೆಂಡತಿಯ ಸಂಗಡ ಮಲಗುವದಕ್ಕೂ ನನ್ನ ಮನೆಗೆ ಹೋಗಲೋ? ನಿನ್ನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ಈ ಕಾರ್ಯ ಮಾಡುವದಿಲ್ಲ ಅಂದನು.
ತನ್ನ ಗುರುವಿಗಿಂತ ಶಿಷ್ಯನು ಹೆಚ್ಚಿನವನಲ್ಲ; ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನು.
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ತನ್ನ ಒಡೆಯನಿಗಿಂತ ಸೇವಕನು ದೊಡ್ಡವನಲ್ಲ; ಇಲ್ಲವೆ ಕಳುಹಿಸಲ್ಪಟ್ಟವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
ತನ್ನ ದಣಿಗಿಂತ ಆಳು ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸಿಸುವರು. ಅವರು ನನ್ನ ಮಾತನ್ನು ಕೈ ಕೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಕೊಳ್ಳುವರು.
ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ