Cross references
ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯವು ಕಪಟಿಗಳನ್ನು ಆಶ್ಚರ್ಯಕ್ಕೊಳಗಾಗಿ--ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುವರು.
ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹ ಮಾಡಿದ ಮನುಷ್ಯರ ಹೆಣಗಳನ್ನು ನೋಡುವರು; ಯಾಕಂದರೆ ಅವರ ಹುಳ ಸಾಯುವದಿಲ್ಲ; ಅವರ ಬೆಂಕಿ ಆರುವದಿಲ್ಲ; ಅವರು ಎಲ್ಲಾ ಮನುಷ್ಯರಿಗೆ ಹೇಸಿಕೆಯಾಗುವರು.
ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.
ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.
ನಿನ್ನ ಕಾಲು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದು ಹಾಕು; ಯಾಕಂದರೆ ನೀನು ಎರಡು ಕಾಲುಗಳುಳ್ಳವ ನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹಾಕ ಲ್ಪಡುವದಕ್ಕಿಂತ ಕುಂಟನಾಗಿ ಜೀವದಲ್ಲಿ ಸೇರುವದು ನಿನಗೆ ಒಳ್ಳೇದು.
ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.
ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು.
ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು; ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.
ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.