Home Bibles ಮಾರ್ಕ 9:24 · ಕನ್ನಡ ಬೈಬಲ್
ಮಾರ್ಕ 9:24 · ಕನ್ನಡ ಬೈಬಲ್

ತಕ್ಷಣವೇ ಮಗುವಿನ ತಂದೆಯು--ಕರ್ತನೇ, ನಾನು ನಂಬು ತ್ತೇನೆ; ನನಗೆ ಅಪನಂಬಿಕೆ ಇಲ್ಲದಂತೆ ನೀನು ಸಹಾಯ ಮಾಡು ಎಂದು ಕಣ್ಣೀರಿನಿಂದ ಕೂಗಿ ಹೇಳಿದನು.

Cross references

2 ಸಮುವೇಲ 16:12

ಒಂದು ವೇಳೆ ಕರ್ತನು ನನ್ನ ಶ್ರಮೆಯನ್ನು ನೋಡಿ ಈ ದಿನ ದಲ್ಲಿ ಅವನು ಮಾಡಿದ ದೂಷಣೆಗೆ ಪ್ರತಿಯಾಗಿ ನನಗೆ ಒಳ್ಳೆಯದನ್ನು ಮಾಡಬಹುದು ಅಂದನು.

2 ಅರಸುಗಳು 20:5

ನೀನು ತಿರುಗಿಕೊಂಡು ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇ ನಂದರೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ; ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವಿ.

ಕೀರ್ತನೆಗಳು 39:12

ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಮೊರೆಗೆ ಕಿವಿಗೊಡು; ನನ್ನ ಕಣ್ಣೀರಿಗೆ ಮೌನ ವಾಗಿರಬೇಡ. ನಾನು ನಿನ್ನ ಸಂಗಡ ಪರದೇಶಸ್ಥನು; ನನ್ನ ತಂದೆಗಳೆಲ್ಲರ ಹಾಗೆ ಪ್ರವಾಸಿಯಾಗಿದ್ದೇನೆ.ಕರ್ತನೇ ನನ್ನನ್ನು ಉಳಿಸು; ಆಗ ನಾನು ಇಲ್ಲಿಂದ ಹೋಗಿಬಿಟ್ಟು ಇಲ್ಲದೆ ಹೋಗುವದಕ್ಕಿಂತ ಮುಂಚೆ ಬಲವನ್ನು ತಿರಿಗಿ ಪಡೆಯುವೆನು.

ಕೀರ್ತನೆಗಳು 126:5

ಕಣ್ಣೀರಿ ನಿಂದ ಬಿತ್ತುವವರು ಉತ್ಸಾಹದಲ್ಲಿ ಕೊಯ್ಯುವರು. ಅಮೂಲ್ಯವಾದ ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವನುತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು.

ಯೆರೆಮಿಯ 14:17

ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ.

ಲೂಕ 7:38

ಆತನ ಹಿಂದೆ ಪಾದಗಳ ಬಳಿಯಲ್ಲಿ ನಿಂತು ಅಳುತ್ತಾ ಆತನ ಪಾದ ಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ ಅವುಗಳನ್ನು ತನ್ನ ತಲೇಕೂದಲಿನಿಂದ ಒರಸಿ ಆತನ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.

ಲೂಕ 7:44

ತರುವಾಯ ಆತನು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನ ನಿಗೆ--ಈ ಸ್ತ್ರೀಯನ್ನು ನೋಡಿದೆಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ; ಇವಳಾದರೋ ನನ್ನ ಪಾದ ಗಳನು ಕಣ್ಣೀರಿನಿಂದ ತೊಳೆದು ತನ್ನ ತಲೇಕೂದಲಿನಿಂದ ಅವುಗಳನ್ನು ಒರೆ

ಲೂಕ 17:5

ಆಗ ಅಪೋಸ್ತಲರು ಕರ್ತನಿಗೆ--ನಮ್ಮ ನಂಬಿಕೆ ಯನ್ನು ಹೆಚ್ಚಿಸು ಅಂದರು.

ಅಪೋಸ್ತಲರ ಕೃತ್ಯಗಳು 10:19

ಪೇತ್ರನು ಆ ದರ್ಶನದ ವಿಷಯ ದಲ್ಲಿ ಆಲೋಚನೆ ಮಾಡುತ್ತಿರಲು ಆತ್ಮನು ಅವ ನಿಗೆ--ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ;

ಅಪೋಸ್ತಲರ ಕೃತ್ಯಗಳು 10:31

ಕೊರ್ನೇಲ್ಯನೇ, ನಿನ್ನ ಪ್ರಾರ್ಥನೆಯು ಕೇಳಬಂತು. ನಿನ್ನ ದಾನಗಳು ದೇವರ ಸನ್ನಿಧಾನದಲ್ಲಿ ನೆನಪಿಗೆ ಬಂದವು.

2 ಕೊರಿಂಥದವರಿಗೆ 2:4

ನಿಮಗೆ ದುಃಖವಾಗಬೇಕಂತಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದು ಕೊಳ್ಳಬೇಕೆಂತಲೇ ನಾನು ಬಹಳ ಕಣ್ಣೀರಿನಿಂದಲೂ ಹೃದಯದ ಬಹುಸಂಕಟದಿಂದಲೂ ವ್ಯಾಕುಲ ದಿಂದಲೂ ನಿಮಗೆ ಬರೆದೆನು.

ಎಫೆಸದವರಿಗೆ 2:8

ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.

ಫಿಲಿಪ್ಪಿಯವರಿಗೆ 1:29

ಹೇಗೆಂದರೆ ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ಆತನ ಪರವಾಗಿ ನಿಮಗೆ ಅನುಗ್ರಹವಾಗಿ ದೊರೆಯಿತು.ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನಲ್ಲಿರುವದೆಂದು ನೀವು ಕೇಳುವಂಥ ಹೋರಾಟವೇ ನಿಮಗುಂಟು.

2 ತೆಸಲೋನಿಕದವರಿಗೆ 1:3

ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ.

2 ತೆಸಲೋನಿಕದವರಿಗೆ 1:11

ಹೀಗಿರುವದರಿಂದ ನಾವು ಯಾವಾ ಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡಿ ಈ ಕರೆಯು ವಿಕೆಗೆ ದೇವರು ನಿಮ್ಮನ್ನು ಯೊಗ್ಯರೆಂದು ಎಣಿಸು ವಂತೆಯೂ ತನ್ನ ಒಳ್ಳೇತನದ ಒಳ್ಳೇ ಸಂತೋಷವನ್ನು ಮತ್ತು ಬಲದಿಂದಾದ ನಂಬಿಕೆಯ ಕಾರ್ಯವನ್ನು ಪೂರೈಸುವ ಹಾಗೆಯೂ ಬೇಡಿಕೊಳ್ಳುತ್ತೇವೆ.ಹೀಗಾದರೆ ನಮ್ಮ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗನುಸಾರವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವದು, ಆತನಲ್ಲಿ ನೀವೂ ಮಹಿಮೆ ಹೊಂದುವಿರಿ.

2 ತಿಮೋಥೆಯ 1:4

ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಹಳವಾಗಿ ಅಪೇಕ್ಷಿಸುತ್ತೇನೆ;

ಹೆಬ್ರಿಯರಿಗೆ 5:7

ಆತನು ತನ್ನ ಶರೀರದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ ಬಲ ವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಭಯಪಟ್ಟದ್ದರಲ್ಲಿ ಕೇಳಲ್ಪ ಟ್ಟನು.

ಹೆಬ್ರಿಯರಿಗೆ 12:2

ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ

ಹೆಬ್ರಿಯರಿಗೆ 12:17

ತರುವಾಯ ಅವನು (ತನ್ನ ತಂದೆಯ) ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲಿರಿ.

Interlinear

Choose Theme