Home Bibles ಮಾರ್ಕ 8:29 · ಕನ್ನಡ ಬೈಬಲ್
ಮಾರ್ಕ 8:29 · ಕನ್ನಡ ಬೈಬಲ್

ಅದಕ್ಕೆ ಆತನು ಅವರಿಗೆ -- ಆದರೆ ನಾನು ಯಾರೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ನೀನು ಕ್ರಿಸ್ತನೇ ಅಂದನು.

Cross references

ಮತ್ತಾಯ 16:15

ಆತನು ಅವರಿಗೆ--ಆದರೆ ನೀವು ನನ್ನನ್ನು ಯಾರನ್ನುತ್ತೀರಿ ಎಂದು ಕೇಳಿ ದನು.

ಮಾರ್ಕ 4:11

ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.

ಲೂಕ 9:20

ಆತನು ಅವರಿಗೆ--ಆದರೆ ನಾನು ಯಾರಾಗಿದ್ದೇನೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರ ವಾಗಿ--ದೇವರ ಕ್ರಿಸ್ತನು ಎಂದು ಹೇಳಿದನು.

ಯೋಹಾನ 1:41

ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ).

ಯೋಹಾನ 4:42

ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.

ಯೋಹಾನ 6:69

ನೀನು ಜೀವವುಳ್ಳ ದೇವರಮಗನಾದ ಆ ಕ್ರಿಸ್ತನೆಂದು ನಾವು ಖಂಡಿತವಾಗಿ ನಂಬಿದ್ದೇವೆ ಅಂದನು.

ಯೋಹಾನ 11:27

ಆಕೆಯು ಆತನಿಗೆ--ಹೌದು, ಕರ್ತನೇ, ಲೋಕಕ್ಕೆ ಬರಬೇಕಾಗಿದ್ದ ದೇವರಮಗನಾದ ಕ್ರಿಸ್ತನು ನೀನೇ ಎಂದು ನಾನು ನಂಬುತ್ತೇನೆ ಅಂದಳು.

ಅಪೋಸ್ತಲರ ಕೃತ್ಯಗಳು 8:36

ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿನ ಬಳಿಗೆ ಬಂದರು. ಕಂಚುಕಿಯು--ಅಗೋ, ನೀರು; ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕೆ ನನಗೆ ಅಡ್ಡಿ ಏನು ಅಂದನು.

ಅಪೋಸ್ತಲರ ಕೃತ್ಯಗಳು 9:20

ಅವನು ಕೂಡಲೆ ಸಭಾಮಂದಿರಗಳಲ್ಲಿ ಕ್ರಿಸ್ತನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರಿ ದನು.

1 ಪೇತ್ರ 2:7

ಆದದರಿಂದ ನಂಬುವವರಾದ ನಿಮಗೆ ಆತನು ಅಮೂಲ್ಯನಾಗಿದ್ದಾನೆ. ಅವಿಧೇಯರಿಗಾ ದರೋ ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

1 ಯೋಹಾನ 4:15

ಯೇಸು ದೇವರ ಮಗನಾಗಿ ದ್ದಾನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಗೊಂಡಿದ್ದಾನೆ, ಅವನು ದೇವರಲ್ಲಿ ನೆಲೆಗೊಂಡಿದ್ದಾನೆ.

1 ಯೋಹಾನ 5:1

ಯೇಸುವು ಕ್ರಿಸ್ತನಾಗಿದ್ದಾನೆಂದು ನಂಬುವ ಯಾವನಾದರೂ ದೇವರಿಂದ ಹುಟ್ಟಿದವನಾಗಿದ್ದಾನೆ; ತನ್ನನ್ನು ಹುಟ್ಟಿಸಿದಾತನನ್ನು ಪ್ರೀತಿ ಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನನ್ನು ಸಹ ಪ್ರೀತಿಸುತ್ತಾನೆ.

Interlinear

Choose Theme