ಮಾರ್ಕ 8:19 · ಕನ್ನಡ ಬೈಬಲ್
ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು ಆತನಿಗೆ--ಹನ್ನೆರಡು ಅಂದರು.
Cross references
ಮತ್ತಾಯ 14:17
ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು.
ಮಾರ್ಕ 6:38
ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ ಅನ್ನಲು ಅವರು ತಿಳಿದುಕೊಂಡು--ಐದು ರೊಟ್ಟಿ ಮತ್ತು ಎರಡು ವಿಾನುಗಳು ಇವೆ ಎಂದು ಹೇಳಿದರು.
ಮಾರ್ಕ 6:43
ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು.
ಲೂಕ 9:12
ಸಂಜೆಯಾಗು ತ್ತಿದ್ದಾಗ ಹನ್ನೆರಡು ಮಂದಿ ಬಂದು ಆತನಿಗೆ--ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಇಳುಕೊಂಡು ಆಹಾರವನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡು; ಯಾಕಂದರೆ ನಾವು ಇಲ್ಲಿ ಅರಣ್ಯ ಸ್ಥಳದಲ್ಲಿ ಇದ್ದೇವಲ್ಲಾ ಅಂದರು.
ಯೋಹಾನ 6:5
ಜನರ ದೊಡ್ಡ ಗುಂಪು ತನ್ನ ಕಡೆಗೆ ಬರುವದನ್ನು ಯೇಸು ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು.