ತರುವಾಯ ಆತನು ಯಾವ ಯಾವ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ಸೀಮೆಯಲ್ಲಿ ಪ್ರವೇಶಿಸಿದನೋ ಅಲ್ಲೆಲ್ಲಾ ಅವರು ಅಸ್ವಸ್ಥ ವಾದವರನ್ನು ಬೀದಿಗಳಲ್ಲಿ ಮಲಗಿಸಿ ಆತನ ಉಡುಪಿನ ಅಂಚನ್ನಾದರೂ ಅವರು ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಯಾರಾರು ಆತನನ್ನು ಮುಟ್ಟಿದರೋ ಅವರು ಸ್ವಸ
Cross references
ನೀನು ಇಸ್ರಾಯೇಲ್ ಮಕ್ಕಳಿಗೆ ಮಾತನಾಡಿ ಅವರಿಗೆ ಹೇಳ ಬೇಕಾದದ್ದೇನಂದರೆ--ಅವರು ತಮ್ಮ ತಲತಲಾಂತರ ಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಮೇಲೆ ಗೊಂಡೆ ಗಳನ್ನು ಕಟ್ಟಿಕೊಳ್ಳಬೇಕು; ಸೆರಗಿನ ಗೊಂಡೆಗಳ ಮೇಲೆ ನೀಲಿದಾರವನ್ನು ಸೇರಿಸಬೇಕು.
ನೀನು ಹೊದ್ದುಕೊಳ್ಳುವ ಶಲ್ಯದ ನಾಲ್ಕು ಮೂಲೆ ಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು.
ಆಗ ಏನಾಯಿ ತಂದರೆ, ಅವರು ಒಬ್ಬ ಮನುಷ್ಯನನ್ನು ಹೂಣಿಡಲು ಹೋಗುವಾಗ ಇಗೋ, ದಂಡನ್ನು ಕಂಡು ಆ ಮನುಷ್ಯ ನನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿದರು. ಸತ್ತ ಮನುಷ್ಯನು ಅದರಲ್ಲಿ ಬಿದ್ದಾಗ ಎಲೀಷನ ಎಲುಬು ಗಳಿಗೆ ತಗುಲಿ ಜೀವ ಉಂಟಾದವನಾಗಿ ತನ್ನ ಕಾಲೂರಿ ಎದ್ದು ನಿಂತನು.
ಆಗ ಇಗೋ, ಹನ್ನೆರಡು ವರುಷಗಳಿಂದಲೂ ರಕ್ತಸ್ರಾವ ರೋಗವಿದ್ದ ಒಬ್ಬ ಸ್ತ್ರೀಯು ಹಿಂದೆ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು.
ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು.
ಆಗ ಸಮೂಹವೆಲ್ಲಾ ಆತ ನನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು; ಯಾಕಂದರೆ ಆತನಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥ ಮಾಡಿತು.
ಆತನ ಹಿಂದೆ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು; ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋಯಿತು.
ಆದರೆ ಯೇಸು--ಇಷ್ಟಕ್ಕೆ ಬಿಡಿರಿ ಅಂದನು. ಆತನು ಅವನ ಕಿವಿಯನ್ನು ಮುಟ್ಟಿ ಅವನನ್ನು ಸ್ವಸ್ಥಪಡಿಸಿದನು.
ಈ ದುರ್ಬಲನಿಗೆ ಸ್ವಸ್ಥವಾದ ಒಳ್ಳೇ ಕಾರ್ಯವು ಹೇಗಾಯಿತೆಂಬ ವಿಷಯವಾಗಿ ಈ ದಿವಸ ನಾವು ವಿಚಾರಿಸಲ್ಪಡುವದಾದರೆ
ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.
ಹೀಗಿರುವದರಿಂದ ಪೇತ್ರನು ಹಾದು ಹೋಗುವಾಗ ಅವನ ನೆರಳಾದರೂ ಅವರಲ್ಲಿ ಕೆಲವರ ಮೇಲೆ ಬೀಳುವಂತೆ ಜನರು ರೋಗಿಗಳನ್ನು ಹಾಸಿಗೆಗಳ ಮೇಲೆಯೂ ದೋಲಿಗಳ ಮೇಲೆಯೂ ಇಟ್ಟು ಬೀದಿಗಳಿಗೆ ತೆಗೆದುಕೊಂಡು ಬಂದರು.