Home Bibles ಮಾರ್ಕ 6:20 · ಕನ್ನಡ ಬೈಬಲ್
ಮಾರ್ಕ 6:20 · ಕನ್ನಡ ಬೈಬಲ್

ಯಾಕಂದರೆ ಯೋಹಾನನು ನೀತಿವಂತನೂ ಪರಿಶುದ್ಧನೂ ಆದ ಮನುಷ್ಯನೆಂದು ಹೆರೋದನು ತಿಳಿದವನಾಗಿ ಅವನಿಗೆ ಭಯಪಟ್ಟು ಅವನನ್ನು ಕಾಪಾಡುತ್ತಿದ್ದನು; ಮತ್ತು ಅವನು ಹೇಳಿದ್ದನ್ನು ಕೇಳಿ ಆನೇಕ ಕಾರ್ಯಗಳನ್ನು ಮಾಡಿದ್ದಲ್ಲದೆ ಅವನು ಹೇಳುವದನ್ನು ಸಂತೋಷದಿಂದ ಕೇಳಿದನು.

Cross references

ನಿರ್ಗಮಕಾಂಡ 11:3

ಇದಲ್ಲದೆ ಕರ್ತನು ಐಗುಪ್ತ್ಯರ ದೃಷ್ಟಿಯಲ್ಲಿ ಜನರಿಗೆ ದಯೆದೊರಕುವಂತೆ ಮಾಡಿದನು. ಆ ಮನುಷ್ಯನಾದ ಮೋಶೆಯು ಐಗುಪ್ತದೇಶದಲ್ಲಿಯೂ ಫರೋಹನ ಸೇವಕರ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹು ದೊಡ್ಡವನಾಗಿದ್ದನು.

1 ಅರಸುಗಳು 21:20

ಆಗ ಅಹಾಬನು ಎಲೀಯನಿಗೆ--ನನ್ನ ಶತ್ರುವೇ, ನೀನು ನನ್ನನ್ನು ಕಂಡುಕೊಂಡಿಯಾ ಅಂದನು. ಅದಕ್ಕ ವನು--ಕಂಡುಕೊಂಡೆನು;

2 ಅರಸುಗಳು 3:12

ಇಸ್ರಾಯೇ ಲಿನ ಅರಸನೂ ಯೆಹೋಷಾಫಾಟನೂ ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು.

2 ಅರಸುಗಳು 6:21

ಇಸ್ರಾಯೇಲಿನ ಅರಸನು ಅವರನ್ನು ಕಂಡಾಗ ಎಲೀಷನಿಗೆ--ನನ್ನ ತಂದೆಯೇ, ನಾನು ಹೊಡೆಯಲೋ? ಹೊಡೆಯ ಲೋ? ಅಂದನು.

2 ಅರಸುಗಳು 13:14

ಆಗ ಎಲೀಷನು ಮರಣಕರವಾದ ವ್ಯಾಧಿ ಯಿಂದ ಬಿದ್ದು ಸತ್ತಾಗ ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು ಅವನ ಮುಂದೆ ಬಿದ್ದು ಅತ್ತು ಅವನಿಗೆ--ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥವೂ ಅದರ ಕುದುರೆ ರಾಹುತನೂ ಆದವನೇ ಅಂದನು.

2 ದಿನವೃತ್ತಾಂತ 24:2

ಯೆಹೋವಾಷನು ಯಾಜಕನಾದ ಯೆಹೋಯಾ ದನ ಸಮಸ್ತ ದಿವಸಗಳಲ್ಲಿ ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು.

2 ದಿನವೃತ್ತಾಂತ 24:15

ಯೆಹೋಯಾದನು ಮುದುಕನಾಗಿ ದಿವಸಗಳು ತುಂಬಿ ಸತ್ತುಹೋದನು. ಅವನು ಸಾಯುವಾಗ ನೂರ ಮೂವತ್ತು ವರುಷಗಳುಳ್ಳವನಾಗಿದ್ದನು.

2 ದಿನವೃತ್ತಾಂತ 26:5

ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾಗಿದ್ದ ಜೆಕರೀಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಕರ್ತನನ್ನು ಹುಡು ಕುವ ದಿವಸಗಳ ಮಟ್ಟಿಗೂ ದೇವರು ಅವನನ್ನು ಅಭಿ ವೃದ್ಧಿಪಡಿಸಿದನು.

ಕೀರ್ತನೆಗಳು 106:12

ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು.

ಯೆಹೆಜ್ಕೇಲ 2:5

ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು.

ಯೆಹೆಜ್ಕೇಲ 33:32

ಇಗೋ, ನೀನು ಅವರಿಗೆ ಇಂಪಾದ ಶಬ್ದವುಳ್ಳಂತ, ತಂತಿವಾದ್ಯಗಳನ್ನು ಚೆನ್ನಾಗಿ ಬಾರಿಸುವಂತ ಒಬ್ಬನ ಮನೋಹರವಾದ ರಾಗದ ಹಾಗಿರುವಿ; ಅವರು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಅವುಗಳನ್ನು ಮಾಡುವದಿಲ್ಲ.ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವದು.

ದಾನಿಯೇಲ 4:18

ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೆಲ್ತೆಶಚ್ಚರ ನೆಂಬ ನೀನು ಅದರ ಅರ್ಥವನ್ನು ಹೇಳು. ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿ ಶುದ್ಧ ದೇವರುಗಳ ಆತ್ಮವು ಇರುವದರಿಂದ ನೀನು ಹೇಳಲು ಸಾಧ್ಯವಾಯಿತು.

ದಾನಿಯೇಲ 4:27

ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.

ದಾನಿಯೇಲ 5:17

ಆಗ ದಾನಿಯೇಲನು ಅರಸನ ಮುಂದೆ--ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳನ್ನು ಮತ್ತೊಬ್ಬರಿಗೆ ಕೊಡು, ನಾನು ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ತಿಳಿಸು ವೆನು ಅಂದನು.

ಮತ್ತಾಯ 14:5

ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.

ಮತ್ತಾಯ 21:26

ಮನುಷ್ಯರಿಂದ ಎಂದು ನಾವು ಹೇಳಿ ದರೆ ಜನರಿಗೆ ಭಯಪಡುತ್ತೇವೆ; ಯಾಕಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸು ತ್ತಾರೆ ಎಂದು ಅಂದುಕೊಂಡರು.

ಮಾರ್ಕ 4:16

ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ

ಮಾರ್ಕ 11:18

ಆಗ ಶಾಸ್ತ್ರಿಗಳೂ ಪ್ರಧಾನಯಾಜಕರೂ ಅದನ್ನು ಕೇಳಿ ಆತನನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಆತನಿಗೆ ಭಯಪಟ್ಟರು.

ಯೋಹಾನ 5:35

ಅವನು ಉರಿದು ಪ್ರಕಾಶಿಸುವ ದೀಪವಾಗಿದ್ದನು; ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಸಂತೋಷಿಸುವದಕ್ಕೆ ಮನಸ್ಸುಳ್ಳವರಾಗಿದ್ದೀರಿ;

Interlinear

Choose Theme