Home Bibles ಮಾರ್ಕ 14:31 · ಕನ್ನಡ ಬೈಬಲ್
ಮಾರ್ಕ 14:31 · ಕನ್ನಡ ಬೈಬಲ್

ಆದರೆ ಅವನು--ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವದಿಲ್ಲ ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಅವರೆಲ್ಲರೂ ಹೇಳಿದರು.

Cross references

ನಿರ್ಗಮಕಾಂಡ 19:8

ಜನರೆಲ್ಲಾ ಏಕವಾಗಿ ಉತ್ತರ ಕೊಟ್ಟು--ಕರ್ತನು ಹೇಳಿದವುಗಳನ್ನೆಲ್ಲಾ ಮಾಡುತ್ತೇವೆ ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿರಿಗಿ ಹೇಳಿದನು.

ದ್ವಿತೀಯೋಪದೇಶಕಾಂಡ 5:27

ನೀನೇ ಸವಿಾಪಕ್ಕೆ ಹೋಗಿ ನಮ್ಮ ದೇವರಾದ ಕರ್ತನು ಹೇಳುವದನ್ನೆಲ್ಲಾ ಕೇಳಿ ನಮ್ಮ ದೇವರಾದ ಕರ್ತನು ನಿನಗೆ ಹೇಳಿದ್ದನ್ನೆಲ್ಲಾ ನೀನೇ ನಮಗೆ ಹೇಳು; ಆಗ ನಾವು ಕೇಳಿ ಅದನ್ನು ಮಾಡುವೆವು ಎಂದು ಹೇಳಿದಿರಿ.

1 ಅರಸುಗಳು 11:22

ಫರೋಹನು ಅವನಿಗೆ -- ಯಾಕೆ? ಇಗೋ, ನೀನು ನಿನ್ನ ದೇಶಕ್ಕೆ ಹೋಗಬೇಕೆಂಬುವ ಹಾಗೆ ನೀನು ನನ್ನ ಸಂಗಡ ಇರುವಾಗ ನಿನಗೆ ಏನು ಕೊರತೆಯಾಯಿತು ಅಂದಾಗ ಅವನು--ಏನೂ ಇಲ್ಲ; ಆದರೆ ಹೇಗಾದರೂ ನಾನು ಅಲ್ಲಿಗೆ ಹೋಗುತ್ತೇನೆ ಅಂದನು.

2 ಅರಸುಗಳು 8:13

ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.

ಯೋಬ 40:4

ಇಗೋ, ನೀಚನಾಗಿದ್ದೇನೆ; ನಿನಗೆ ಏನು ಪ್ರತ್ಯುತ್ತರ ಕೊಡಲಿ? ನನ್ನ ಕೈಯಿಂದ ಬಾಯಿ ಮುಚ್ಚಿಕೊಳ್ಳುತ್ತೇನೆ.

ಕೀರ್ತನೆಗಳು 30:6

ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು.

ಸಾಮೇತಿಗಳು 16:18

ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.

ಸಾಮೇತಿಗಳು 18:24

ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.

ಸಾಮೇತಿಗಳು 29:23

ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.

ಯೆರೆಮಿಯ 10:23

ಅವರಲ್ಲಿ ಶೇಷವು ಇರುವದಿಲ್ಲ; ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಅಂದರೆ ಅವರ ವಿಚಾರಣೆಯ ವರುಷವನ್ನೇ ತರುತ್ತೇನೆ.

ಯೆರೆಮಿಯ 17:9

ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವದಕ್ಕೂ ನೆಡುವದಕ್ಕೂ ಮಾತನಾಡುತ್ತೇನೋ

ಮಾರ್ಕ 10:39

ಅದಕ್ಕೆ ಅವರು ಆತನಿಗೆ--ನಮ್ಮಿಂದಾಗುವದು ಅಂದರು. ಆದರೆ ಯೇಸು ಅವರಿಗೆ--ನಾನು ಕುಡಿ ಯುವ ಪಾತ್ರೆಯಲ್ಲಿ ನೀವು ನಿಜವಾಗಿಯೂ ಕುಡಿಯು ವಿರಿ; ಮತ್ತು ನಾನು ಹೊಂದುವ ಬಾಪ್ತಿಸ್ಮದಿಂದ ನೀವು ಬಾಪ್ತಿಸ್ಮ ಹೊಂದುವಿರಿ.

ಯೋಹಾನ 13:37

ಪೇತ್ರನು ಆತನಿಗೆ-- ಕರ್ತನೇ, ನಾನು ಯಾಕೆ ಈಗ ನಿನ್ನ ಹಿಂದೆ ಬರ ಲಾರೆನು? ನಿನಗೋಸ್ಕರ ನನ್ನ ಪ್ರಾಣವನ್ನು ಕೊಡು ವೆನು ಅಂದನು.ಯೇಸು ಪ್ರತ್ಯುತ್ತರವಾಗಿ ಅವ ನಿಗೆ--ನೀನು ನನಗೋಸ್ಕರ ನಿನ್ನ ಪ್ರಾಣವನ್ನು ಕೊಡು ತ್ತೀಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವ ತನಕ ಹುಂಜವು ಕೂಗುವದಿಲ್ಲ ಅಂದನು.

Interlinear

Choose Theme