Home Bibles ಮಾರ್ಕ 14:28 · ಕನ್ನಡ ಬೈಬಲ್
ಮಾರ್ಕ 14:28 · ಕನ್ನಡ ಬೈಬಲ್

ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗು ವೆನು ಎಂದು ಹೇಳಿದನು.

Cross references

ಮತ್ತಾಯ 16:21

ತಾನು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಶ್ರಮೆಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಎದ್ದು ಬರುವದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು.

ಮತ್ತಾಯ 26:32

ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂಚಿತ ವಾಗಿ ಗಲಿಲಾಯಕ್ಕೆ ಹೋಗುವೆನು ಅಂದನು.

ಮತ್ತಾಯ 28:7

ಬೇಗನೆ ಹೋಗಿ ಆತನು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಆತನ ಶಿಷ್ಯರಿಗೆ ಹೇಳಿರಿ; ಮತ್ತು ಇಗೋ, ನಿಮಗೆ ಮುಂದಾಗಿ ಆತನು ಗಲಿಲಾಯಕ್ಕೆ ಹೋಗುತ್ತಾನೆ. ನೀವು ಆತನನ್ನು ಅಲ್ಲಿ ಕಾಣುವಿರಿ; ಇಗೋ, ನಾನು ನಿಮಗೆ ಹೇಳಿದ್ದೇನೆ ಅಂದನು.

ಮತ್ತಾಯ 28:10

ಆಗ ಯೇಸು ಅವರಿಗೆ-- ಭಯ ಪಡಬೇಡಿರಿ; ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವ ರೆಂದೂ ಹೋಗಿ ಅವರಿಗೆ ಹೇಳಿರಿ ಅಂದನು.

ಮತ್ತಾಯ 28:16

ಆಗ ಯೇಸು ತಮಗೆ ನೇಮಿಸಿದ ಗಲಿಲಾಯ ದಲ್ಲಿರುವ ಬೆಟ್ಟಕ್ಕೆ ಹನ್ನೊಂದು ಮಂದಿ ಶಿಷ್ಯರು ಹೋದರು.

ಮಾರ್ಕ 16:7

ಆದರೆ ನೀವು ಹೊರಟುಹೋಗಿ ಆತನು ನಿಮಗೆ ಹೇಳಿದಂತೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ; ಅಲ್ಲಿ ನೀವು ಆತನನ್ನು ಕಾಣುವಿರಿ ಎಂದು ಆತನ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ ಅಂದನು.

ಯೋಹಾನ 21:1

ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--

1 ಕೊರಿಂಥದವರಿಗೆ 15:4

ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.

Interlinear

Choose Theme