Home Bibles ಮಾರ್ಕ 12:13 · ಕನ್ನಡ ಬೈಬಲ್
ಮಾರ್ಕ 12:13 · ಕನ್ನಡ ಬೈಬಲ್

ಅವರು ಆತನನ್ನು ಆತನ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯ ರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು.

Cross references

ಕೀರ್ತನೆಗಳು 38:12

ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.

ಕೀರ್ತನೆಗಳು 56:5

ಪ್ರತಿದಿನ ಅವರು ನನ್ನ ಮಾತುಗಳನ್ನು ಅಪಾರ್ಥ ಮಾಡುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ನನ್ನ ಕೇಡಿಗಾಗಿವೆ.

ಕೀರ್ತನೆಗಳು 140:5

ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.

ಯೆಶಾಯ 29:21

ಒಂದು ಮಾತಿನ ನಿಮಿತ್ತ ಮನುಷ್ಯರಿಗೆ ತಪ್ಪು ಹೊರಿಸುವವರೂ ಬಾಗಲಲ್ಲಿ ವಾದಿಸುವವನಿಗೆ ಉರ್ಲು ಒಡ್ಡುವವರೂ ಏನೂ ಇಲ್ಲದೆ ಕಾರ್ಯಕ್ಕೆ ನೀತಿವಂತನನ್ನು ತಿರುಗಿಸುವವರೂ ನಿರ್ನಾಮವಾಗುವರು.

ಮತ್ತಾಯ 16:6

ಆಗ ಯೇಸು ಅವರಿಗೆ--ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರಿಕೆಯಿಂದ ಜಾಗರೂಕ ರಾಗಿರ್ರಿ ಎಂದು ಹೇಳಿದನು.

ಮತ್ತಾಯ 22:15

ಆಗ ಫರಿಸಾಯರು ಹೊರಟುಹೋಗಿ ಆತನನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು.

ಮಾರ್ಕ 3:6

ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.

ಮಾರ್ಕ 8:15

ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.

ಲೂಕ 11:54

ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು.

ಲೂಕ 20:20

ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು.

Interlinear

Choose Theme