ಆಗ ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು; ಮತ್ತು ಯೇಸು ಅವರ ಮುಂದಾಗಿ ಹೋದದ್ದರಿಂದ ಅವರು ಆಶ್ಚರ್ಯಪಟ್ಟರು; ಮತ್ತು ಆತನನ್ನು ಹಿಂಬಾಲಿಸುತ್ತಿದ್ದಾಗ ಭಯಪಟ್ಟರು. ಆತನು ತನ್ನ ಹನ್ನೆರಡು ಮಂದಿಯನ್ನು ತಿರಿಗಿ ಕರೆದು ತನಗೆ ಸಂಭವಿಸುವವುಗಳು ಯಾವವೆಂದು ಅವರಿ
Cross references
ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.
ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
ಆತನು ಪ್ರತ್ಯುತ್ತರವಾಗಿ ಅವ ರಿಗೆ--ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳು ವದಕ್ಕೆ ನಿಮಗೆ ಕೊಡಲ್ಪಟ್ಟಿದೆ; ಆದರೆ ಅವರಿಗೆ ಕೊಡ ಲ್ಪಟ್ಟಿಲ್ಲ.
ತರುವಾಯ ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ವಿಂಗಡವಾಗಿ ಕರೆದು ಅವರಿಗೆ--
ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.
ಇದಾದಮೇಲೆ ಯೇಸು ತಾನು ಮೇಲಕ್ಕೆ ಅಂಗೀ ಕರಿಸಲ್ಪಡುವ ಸಮಯವು ಬಂದಾಗ ಯೆರೂಸಲೇಮಿಗೆ ಹೋಗುವದಕ್ಕಾಗಿ ಆತನು ತನ್ನ ಮುಖವನ್ನು ದೃಢಮಾಡಿಕೊಂಡು
ಆತನು ತನ್ನ ಶಿಷ್ಯರ ಕಡೆಗೆ ತಿರುಗಿಕೊಂಡು--ನೀವು ನೋಡು ತ್ತಿರುವವುಗಳನ್ನು ನೋಡುವ ಕಣ್ಣುಗಳು ಧನ್ಯವಾದವು ಗಳು ಎಂದು ಪ್ರತ್ಯೇಕವಾಗಿ ಹೇಳಿದನು.
ಇದಲ್ಲದೆ ಆತನು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ--ಇಗೋ, ನಾವು ಯೆರೂಸ ಲೇಮಿಗೆ ಹೋಗುತ್ತೇವೆ; ಮನುಷ್ಯಕುಮಾರನ ವಿಷಯ ದಲ್ಲಿ ಪ್ರವಾದಿಗಳಿಂದ ಬರೆಯಲ್ಪಟ್ಟವುಗಳೆಲ್ಲವೂ ನೆರವೇರಬೇಕು.
ಆತನ ಶಿಷ್ಯರು ಆತನಿಗೆ--ಬೋಧಕನೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿ ದ್ದರಲ್ಲಾ; ತಿರಿಗಿ ನೀನು ಅಲ್ಲಿಗೆ ಹೋಗುತ್ತೀಯೋ? ಅಂದರು.
ತರು ವಾಯ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ--ನಾವು ಸಹ ಆತನೊಂದಿಗೆ ಸಾಯುವಂತೆ ಹೋಗೋಣ ಅಂದನು.