Home Bibles ಮಾರ್ಕ 10:11 · ಕನ್ನಡ ಬೈಬಲ್
ಮಾರ್ಕ 10:11 · ಕನ್ನಡ ಬೈಬಲ್

ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ.

Cross references

ದ್ವಿತೀಯೋಪದೇಶಕಾಂಡ 24:2

ಅವಳು ಅವನ ಮನೆಯನ್ನು ಬಿಟ್ಟು ಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗ ಬಹುದು.

ಮತ್ತಾಯ 5:31

ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿದ್ದರೆ ಅವನು ಆಕೆಗೆ ತ್ಯಾಗಪತ್ರ ಕೊಡಲಿ ಎಂದು ಹೇಳಿಯದೆ;

ಮತ್ತಾಯ 19:9

ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣದಿಂ ದಲ್ಲದೆ ಯಾವನಾದರೂ ತನ್ನ ಹೆಂಡತಿಯನ್ನು ಬಿಟು ಮತ್ತೊಬ್ಬಳನ್ನು ಮದುವೆಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುತ್ತಾನೆ.

ಲೂಕ 16:18

ಯಾವನು ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುತ್ತಾನೆ; ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರಮಾಡುತ್ತಾನೆ.

ರೋಮಾಪುರದವರಿಗೆ 7:3

ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಮದುವೆ ಮಾಡಿಕೊಂಡರೆ ವ್ಯಭಿ ಚಾರಿಣಿ ಎಂದು ಕರೆಯಲ್ಪಡುವಳು; ಗಂಡನು ಸತ್ತರೆ ಆ ನ್ಯಾಯಪ್ರಮಾಣದಿಂದ ಆಕೆಯು ಬಿಡುಗಡೆಯಾಗಿ ದ್ದಾಳೆ. ಹೀಗೆ ಆಕೆ ಮತ್ತೊಬ್ಬನನ್ನು ಮದುವೆ ಮಾಡಿ ಕೊಂಡರೂ ವ್ಯಭಿಚಾರಿಣಿಯಲ್ಲ.

1 ಕೊರಿಂಥದವರಿಗೆ 7:4

ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರ ವಿಲ್ಲ; ಆದರೆ ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಆದರೆ ಹೆಂಡತಿಗುಂಟು.

1 ಕೊರಿಂಥದವರಿಗೆ 7:10

ಮದುವೆ ಮಾಡಿಕೊಂಡಿರು ವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆ ಏನಂದರೆ--ಹೆಂಡತಿಯು ಗಂಡನನ್ನು ಬಿಟ್ಟು ಅಗಲ ಬಾರದು.

ಹೆಬ್ರಿಯರಿಗೆ 13:4

ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.

Interlinear

Choose Theme