Home Bibles ಲೂಕ 8:2 · ಕನ್ನಡ ಬೈಬಲ್
ಲೂಕ 8:2 · ಕನ್ನಡ ಬೈಬಲ್

ಇದಲ್ಲದೆ ದುರಾತ್ಮಗಳಿಂ ದಲೂ ರೋಗಗಳಿಂದಲೂ ಸ್ವಸ್ಥಮಾಡಲ್ಪಟ್ಟ ಕೆಲವು ಸ್ತ್ರೀಯರು ಮತ್ತು ಏಳು ದೆವ್ವಗಳು ಬಿಟ್ಟು ಹೋಗಿದ್ದ ಮಗ್ದಲಿನ ಎಂದು ಕರೆಯಲ್ಪಟ್ಟ ಮರಿಯಳೂ

Cross references

ಮತ್ತಾಯ 27:55

ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ ಆತನಿಗೆ ಸೇವೆ ಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು.

ಮಾರ್ಕ 15:40

ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯಳು, ಸಲೋಮೆಯು ಇದ್ದರು.

ಮಾರ್ಕ 16:1

ಸಬ್ಬತ್ತು ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಯಾದ ಮರಿಯಳೂ ಮತ್ತು ಸಲೋಮೆಯೂ ಆತನಿಗೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡು ಕೊಂಡು ಬಂದರು.

ಮಾರ್ಕ 16:9

ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.

ಲೂಕ 8:30

ಯೇಸು ಅವನಿಗೆ--ನಿನ್ನ ಹೆಸರು ಏನು ಎಂದು ಕೇಳಿದನು. ಅದಕ್ಕವನು--ಲೀಜೆನ್‌ (ದಂಡು) ಅಂದನು. ಯಾಕಂ ದರೆ ಬಹಳ ದೆವ್ವಗಳು ಅವನಲ್ಲಿ ಸೇರಿಕೊಂಡಿದ್ದವು.

ಲೂಕ 23:27

ಆಗ ಜನರ ದೊಡ್ಡ ಗುಂಪೂ ಸ್ತ್ರೀಯರೂ ಆತನಿ ಗಾಗಿ ಶೋಕಿಸುತ್ತಾ ಗೋಳಾಡುತ್ತಾ ಆತನನ್ನು ಹಿಂಬಾ ಲಿಸಿದರು.

ಲೂಕ 23:49

ಆತನಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯ ದಿಂದ ಆತನನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.

ಲೂಕ 23:55

ಇದಲ್ಲದೆ ಗಲಿಲಾಯದಿಂದ ಆತ ನೊಂದಿಗೆ ಬಂದಿದ್ದ ಸ್ತ್ರೀಯರು ಸಹ ಹಿಂಬಾಲಿಸಿ ಹೋಗಿ ಸಮಾಧಿಯನ್ನೂ ಆ ಸಮಾಧಿಯಲ್ಲಿ ಆತನ ದೇಹವನ್ನು ಹೇಗೆ ಇಟ್ಟರೆಂಬದನ್ನೂ ನೋಡಿದರು.ಅವರು ಹಿಂತಿರುಗಿದವರಾಗಿ ಪರಿಮಳ ದ್ಯವ್ಯವನ್ನು ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡು ಆಜ್ಞಾನು ಸಾರವಾಗಿ ಸಬ್ಬತ್ತಿನ ದಿನದಲ್ಲಿ ವಿಶ್ರಮಿಸಿಕೊಂಡರು.

ಯೋಹಾನ 19:25

ಆಗ ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ಸಹೋದರಿಯೂ ಕ್ಲೋಫನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.

ಅಪೋಸ್ತಲರ ಕೃತ್ಯಗಳು 1:14

ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆ ವಿಜ್ಞಾ ಪನೆಗಳಲ್ಲಿ ನಿರತರಾಗಿದ್ದರು. ಅವರೊಂದಿಗೆ ಸ್ತ್ರೀಯರೂ ಯೇಸುವಿನ ತಾಯಿಯಾದ ಮರಿಯಳೂ ಆತನ ಸಹೋದರರೂ ಇದ್ದರು.

Interlinear

Choose Theme