Home Bibles ಲೂಕ 4:42 · ಕನ್ನಡ ಬೈಬಲ್
ಲೂಕ 4:42 · ಕನ್ನಡ ಬೈಬಲ್

ಬೆಳಗಾದ ಮೇಲೆ ಆತನು ಅರಣ್ಯ ಸ್ಥಳಕ್ಕೆ ಹೊರಟು ಹೋದನು; ಜನರು ಆತನನ್ನು ಹುಡುಕಿಕೊಂಡು ಆತನ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗ ಬಾರದೆಂದು ಆತನನ್ನು ತಡೆದರು.

Cross references

ಮತ್ತಾಯ 14:13

ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.

ಮಾರ್ಕ 1:35

ಮುಂಜಾನೆ ಹೊತ್ತು ಮೂಡುವದಕ್ಕಿಂತ ಬಹಳ ಮುಂಚಿತವಾಗಿ ಆತನು ಎದ್ದು ಹೊರಗೆ ನಿರ್ಜನ ವಾದ ಸ್ಥಳಕ್ಕೆ ಹೊರಟುಹೋಗಿ ಅಲ್ಲಿ ಪ್ರಾರ್ಥನೆ ಮಾಡಿದನು.

ಮಾರ್ಕ 1:45

ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ

ಮಾರ್ಕ 6:33

ಅವರು ಹೊರಡುವದನ್ನು ಜನರು ನೋಡಿ ಅನೇಕರು ಆತನ ಗುರುತು ಹಿಡಿದು ಎಲ್ಲಾ ಪಟ್ಟಣಗಳಿಂದ ಕಾಲುನಡಿಗೆಯಾಗಿ ಅಲ್ಲಿಗೆ ಓಡುತ್ತಾ ಅವರಿಗಿಂತಲೂ ಮುಂದಾಗಿ ಆತನ ಬಳಿಗೆ ಸೇರಿಬಂದರು.

ಲೂಕ 6:12

ಇದಾದ ಮೇಲೆ ಆತನು ಆ ದಿವಸಗಳಲ್ಲಿ ಪ್ರಾರ್ಥಿಸುವದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ ರಾತ್ರಿ ಯೆಲ್ಲಾ ದೇವರಿಗೆ ಪ್ರಾರ್ಥಿಸಿದನು.

ಲೂಕ 8:37

ಆಗ ಗದರೇನನ ಸೀಮೆಯ ಸುತ್ತು ಮುತ್ತಲಿನ ಜನಸಮೂಹವೆಲ್ಲವು ಬಹಳ ಭಯ ಹಿಡಿದವರಾದದರಿಂದ ಆತನು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಆತನನ್ನು ಬೇಡಿ ಕೊಂಡರು; ಆತನು ದೋಣಿಯನ್ನು ಹತ್ತಿಹಿಂದಿರುಗಿ ದನು.

ಲೂಕ 24:29

ಆದರೆ ಅವರು ಆತನಿಗೆ--ನಮ್ಮೊಂದಿಗೆ ಇರು; ಯಾಕಂದರೆ ಈಗ ಸಾಯಂಕಾಲ ವಾಗುತ್ತಾ ಇದೆ ಮತ್ತು ಹಗಲು ಬಹಳ ಮಟ್ಟಿಗೆ ಕಳೆಯಿತು ಎಂದು ಹೇಳಿ ಆತನನ್ನು ಬಲವಂತ ಮಾಡಿ ದರು. ಆಗ ಆತನು ಅವರೊಂದಿಗೆ ಇರುವದಕ್ಕಾಗಿ ಹೋದನು.

ಯೋಹಾನ 4:34

ಆದರೆ ಯೇಸು ಅವರಿಗೆ--ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು.

ಯೋಹಾನ 4:40

ಹೀಗೆ ಆ ಸಮಾರ್ಯ ದವರು ಆತನ ಬಳಿಗೆ ಬಂದಾಗ ಆತನು ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅಲ್ಲಿ ಇಳುಕೊಂಡನು.

ಯೋಹಾನ 6:24

ಆಗ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವದನ್ನು ಜನರು ನೋಡಿ ಅವರು ಸಹ ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.

Interlinear

Choose Theme