Home Bibles ಲೂಕ 3:2 · ಕನ್ನಡ ಬೈಬಲ್
ಲೂಕ 3:2 · ಕನ್ನಡ ಬೈಬಲ್

ಅನ್ನನು ಮತ್ತು ಕಾಯಫನು ಮಹಾ ಯಾಜಕರೂ ಆಗಿದ್ದಾಗ ಅಡವಿಯಲ್ಲಿದ್ದ ಜಕರೀಯನ ಮಗನಾದ ಯೋಹಾನನ ಬಳಿಗೆ ದೇವರ ವಾಕ್ಯವು ಬಂತು.

Cross references

ಯೆಶಾಯ 40:3

ಇಗೋ, ಒಂದು ವಾಣಿ, ಅರಣ್ಯದಲ್ಲಿ ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ; ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ.

ಯೆರೆಮಿಯ 1:2

ಯೆಹೂದದ ಅರಸನಾದ ಆಮೋನನ ಮಗನಾದ ಯೋಷೀಯನ ದಿನಗಳಲ್ಲಿ ಅವನ ಆಳಿಕೆಯ ಹದಿಮೂರನೇ ವರುಷದಲ್ಲಿ ಅವನಿಗೆ ಕರ್ತನ ವಾಕ್ಯವು ಉಂಟಾಯಿತು.

ಯೆರೆಮಿಯ 2:1

ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--

ಯೆಹೆಜ್ಕೇಲ 1:3

ಕರ್ತನ ವಾಕ್ಯವು ಕಸ್ದೀಯರ ದೇಶದ ಕೆಬಾರ್‌ ನದಿಯ ಬಳಿಯಲ್ಲಿ ಬೂಜಿಯ ಮಗನೂ ಯಾಜಕನೂ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು, ಕರ್ತನ ಕೈ ಅವನ ಮೇಲಿತ್ತು.

ಹೊಶೇಯ 1:1

ಯೆಹೂದದ ಅರಸುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗನಾದ ಹೋಶೇ ಯನಿಗೆ ಕರ್ತನ ವಾಕ್ಯವು ಬಂತು.

ಯೋನ 1:1

ಕರ್ತನ ವಾಕ್ಯವು ಅಮಿತ್ತೈಯನ ಮಗನಾದ ಯೋನನಿಗೆ ಉಂಟಾಯಿತು.

ಮೀಕ 1:1

ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು.

ಸೆಫನ್ಯ 1:1

ಯೆಹೂದದ ಅರಸನಾದ ಅಮೋನನ ಮಗನಾದ ಯೋಷೀಯನ ದಿವಸಗಳಲ್ಲಿ ಹಿಜ್ಕೀಯನ ಮಗನಾದ ಅಮರ್ಯನ ಮಗನಾದ ಗೆದಲೀಯನ ಮಗನಾದ ಕೂಶೀಯನ ಮಗನಾದ ಚೆಫನ್ಯನಿಗೆ ಉಂಟಾದ ಕರ್ತನ ದೈವೋಕ್ತಿ

ಮತ್ತಾಯ 3:1

ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ--

ಮತ್ತಾಯ 11:7

ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ -- ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?

ಮತ್ತಾಯ 26:3

ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು

ಮಾರ್ಕ 1:3

ಕರ್ತನ ಮಾರ್ಗವನ್ನು ನೀವು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದು.

ಲೂಕ 1:59

ತರುವಾಯ ಅವರು ಎಂಟನೇ ದಿನದಲ್ಲಿ ಆ ಮಗುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಬಂದು ಅವನ ತಂದೆಯ ಹೆಸರಿನಂತೆ ಅವನನ್ನು ಜಕರೀಯನೆಂದು ಕರೆದರು.

ಲೂಕ 1:80

ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.

ಲೂಕ 3:3

ಅವನು ಯೊರ್ದನಿನ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು ಪಾಪಗಳ ಪರಿಹಾರಕ್ಕಾಗಿ ಮಾನ ಸಾಂತರದ ಬಾಪ್ತಿಸ್ಮವನ್ನು ಸಾರಿ ಹೇಳುವವನಾದನು.

ಯೋಹಾನ 1:23

ಅವನು--ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿ ಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂದು ಪ್ರವಾದಿ ಯಾದ ಯೆಶಾಯನು ಹೇಳಿದ ಶಬ್ದವೇ ನಾನು ಎಂದು ಉತ್ತರಕೊಟ್ಟನು.

ಯೋಹಾನ 11:49

ಆದರೆ ಅವರಲ್ಲಿ ಆ ವರುಷದ ಮಹಾಯಾಜಕ ನಾದ ಕಾಯಫನೆಂಬವನು ಅವರಿಗೆ--

ಯೋಹಾನ 18:13

ಆತನನ್ನು ಮೊದಲು ಅನ್ನನ ಬಳಿಗೆ ಕರೆದು ಕೊಂಡು ಹೋದರು; ಅವನು ಆ ವರುಷದ ಮಹಾ ಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.

ಯೋಹಾನ 18:24

ಅನ್ನನು ಆತನನ್ನು ಕಟ್ಟಿಸಿ ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

ಅಪೋಸ್ತಲರ ಕೃತ್ಯಗಳು 4:6

ಮಹಾಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಕರೆಲ್ಲರೂ ಯೆರೂಸ ಲೇಮಿನಲ್ಲಿ ಕೂಡಿಬಂದರು.

Interlinear

Choose Theme