Home Bibles ☰ Books ಲೂಕ 24:37 · ಕನ್ನಡ ಬೈಬಲ್
ಲೂಕ 24:37 · ಕನ್ನಡ ಬೈಬಲ್

ಆದರೆ ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದು ಭೂತವೆಂದು ಭಾವಿಸಿದರು.

Cross references

1 ಸಮುವೇಲ 28:13

ಅರಸನು ಅವಳಿಗೆಭಯಪಡಬೇಡ. ನೀನು ನೋಡಿದ್ದೇನು ಅಂದನು. ಆಗ ಆ ಸ್ತ್ರೀಯು ಸೌಲನಿಗೆ--ದೇವರುಗಳು ಭೂಮಿ ಯೊಳಗಿಂದ ಎದ್ದು ಬರುವದನ್ನು ನೋಡಿದೆನು ಅಂದಳು.

ಯೋಬ 4:14

ಭಯವೂ ನಡುಗೂ ನನ್ನನ್ನು ಹಿಡಿದವು; ನನ್ನ ಎಲ್ಲಾ ಎಲುಬು ಗಳನ್ನು ನಡುಗಿಸಿತು.

ಮತ್ತಾಯ 14:26

ಆತನು ಸಮುದ್ರದ ಮೇಲೆ ನಡೆಯುವದನ್ನು ಶಿಷ್ಯರು ನೋಡಿ ಕಳವಳಪಟ್ಟು--ಇದು ಭೂತ ಎಂದು ಭೀತಿಯಿಂದ ಕೂಗಿ ಕೊಂಡರು.

ಮಾರ್ಕ 6:49

ಆದರೆ ಆತನು ಸಮುದ್ರದ ಮೇಲೆ ನಡೆಯುತ್ತಿರು ವದನ್ನು ಅವರು ನೋಡಿದಾಗ ಅದೊಂದು ಭೂತ ವೆಂದು ಭಾವಿಸಿ ಕೂಗಿಕೊಂಡರು.

ಲೂಕ 16:30

ಆಗ ಅವನು--ಹಾಗಲ್ಲ, ತಂದೆ ಯಾದ ಅಬ್ರಹಾಮನೇ, ಸತ್ತವರೊಳಗಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಮಾನಸಾಂತರ ಪಡುವರು ಅಂದನು.ಆದರೆ ಅವನು--ಅವರು ಮೋಶೆಯು ಮತ್ತು ಪ್ರವಾದಿಗಳು ಹೇಳಿದ್ದನ್ನು ಕೇಳದೆ ಹೋದರೆ ಸತ್ತವರೊಳಗಿಂದ ಒಬ್ಬನು ಎದ್ದರೂ ಅವರು ಒಪ್ಪುವದಿಲ್ಲ ಎಂದು ಅವನಿಗೆ ಹೇಳಿದನು.

ಅಪೋಸ್ತಲರ ಕೃತ್ಯಗಳು 12:15

ಅವರು ಅವಳಿಗೆ--ನಿನಗೆ ಹುಚ್ಚು ಹಿಡಿದದೆ ಎಂದು ಹೇಳಿದರು. ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳಿದ್ದಕ್ಕೆ ಅವರು--ಅವನು ಪೇತ್ರನ ದೂತನು ಅಂದರು.

Interlinear

Choose Theme