Home Bibles ಲೂಕ 24:26 · ಕನ್ನಡ ಬೈಬಲ್
ಲೂಕ 24:26 · ಕನ್ನಡ ಬೈಬಲ್

ಕ್ರಿಸ್ತನು ಇವೆಲ್ಲಾ ಶ್ರಮೆಗಳನ್ನು ಅನುಭವಿಸಿ ತನ ಮಹಿಮೆಯಲ್ಲಿ ಪ್ರವೇಶಿಸುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ

Cross references

ಆದಿಕಾಂಡ 22:6

ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು.

ಕೀರ್ತನೆಗಳು 22:1

ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ.

ಕೀರ್ತನೆಗಳು 69:1

ಓ ದೇವರೇ ನನ್ನನ್ನು ರಕ್ಷಿಸು; ನೀರು ನನ್ನ ಪ್ರಾಣದ ವರೆಗೂ ಬಂದಿದೆ.

ಯೆಶಾಯ 53:1

ನಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು?

ಜೆಕರ್ಯ 13:7

ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ.

ಲೂಕ 24:7

ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹೇಗೆ ಒಪ್ಪಿಸಲ್ಪಟ್ಟವನಾಗಿ ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಏಳುವನು ಎಂದು ನಿಮಗೆ ಹೇಳಿದ್ದನ್ನು ನೀವು ನೆನಪು ಮಾಡಿಕೊಳ್ಳಿರಿ ಅಂದರು.

ಲೂಕ 24:44

ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.

ಲೂಕ 24:46

ಅವರಿಗೆ--ಕ್ರಿಸ್ತನು ಹೀಗೆ ಶ್ರಮೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವಾಗಿತ್ತೆಂತಲೂ

ಅಪೋಸ್ತಲರ ಕೃತ್ಯಗಳು 17:3

ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವರೊಳಗಿಂದ ತಿರಿಗಿ ಎದ್ದು ಬರುವದು ಅಗತ್ಯವೆಂತಲೂ--ನಾನು ನಿಮಗೆ ಪ್ರಸಿದ್ಧಿ ಪಡಿಸುವ ಈ ಯೇಸುವೇ ಕ್ರಿಸ್ತನೆಂತಲೂ ದೃಢವಾಗಿ ಹೇಳಿ ಸ್ಥಾಪಿಸಿದನು.

1 ಕೊರಿಂಥದವರಿಗೆ 15:3

ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.

ಹೆಬ್ರಿಯರಿಗೆ 2:8

ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ ಎಂದು ಸಾಕ್ಷಿ ಹೇಳಿದನು; ಆತನು ಎಲ್ಲವನ್ನೂ ಮನುಷ್ಯನಿಗೆ ಅಧೀನಮಾಡಿದ ನೆಂಬದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ; ಆದರೆ ಎಲ್ಲವೂ ಅವನಿಗೆ ಅಧೀನವಾಗಿರು ವದನ್ನು ನಾವು ಇನ್ನೂ ಕಾಣುವದಿಲ್ಲ.

ಹೆಬ್ರಿಯರಿಗೆ 9:22

ನ್ಯಾಯಪ್ರಮಾಣದಿಂದ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತ ಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ.

ಹೆಬ್ರಿಯರಿಗೆ 12:2

ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ

1 ಪೇತ್ರ 1:3

ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ಜೀವಕರವಾದ ನಿರೀಕ್ಷೆಗೂ

1 ಪೇತ್ರ 1:11

ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಪ್ರಭಾವವನ್ನೂ ಮುಂದಾಗಿ ಸಾಕ್ಷೀಕರಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವ ನೆಂಬದನ್ನು ಅವರು ಪರಿಶೋಧನೆ ಮಾಡಿದರು.

Interlinear

Choose Theme