ಲೂಕ 23:21 · ಕನ್ನಡ ಬೈಬಲ್
ಆದರೆ ಅವರು--ಅವನನ್ನು ಶಿಲುಬೆಗೆ ಹಾಕಿಸು, ಅವನನ್ನು ಶಿಲುಬೆಗೆ ಹಾಕಿಸು ಎಂದು ಕೂಗುತ್ತಾ ಹೇಳಿದರು.
Cross references
ಮತ್ತಾಯ 27:22
ಪಿಲಾತನು ಅವರಿಗೆ--ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಅನ್ನಲು ಅವರೆಲ್ಲರೂ--ಅವನನ್ನು ಶಿಲುಬೆಗೆ ಹಾಕಿಸು ಎಂದು ಅವನಿಗೆ ಹೇಳಿದರು.
ಮಾರ್ಕ 15:13
ಆತನನ್ನು ಶಿಲುಬೆಗೆ ಹಾಕಿಸು ಎಂದು ತಿರಿಗಿ ಅವರು ಕೂಗಿ ಕೊಂಡರು.
ಲೂಕ 23:23
ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.
ಯೋಹಾನ 19:15
ಆದರೆ ಅವರು--ತೆಗೆದುಹಾಕು, ತೆಗೆದುಹಾಕು, ಅವನನ್ನು ಶಿಲುಬೆಗೆ ಹಾಕು ಅಂದರು. ಅದಕ್ಕೆ ಪಿಲಾತನು ಅವರಿಗೆ--ನಿಮ್ಮ ಅರಸನನ್ನು ಶಿಲುಬೆಗೆ ಹಾಕಲೋ ಅಂದಾಗ ಪ್ರಧಾನಯಾಜಕರು--ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರ ಕೊಟ್ಟರು.