Home Bibles ಲೂಕ 22:55 · ಕನ್ನಡ ಬೈಬಲ್
ಲೂಕ 22:55 · ಕನ್ನಡ ಬೈಬಲ್

ಅವರು ಅಂಗಳದ ನಡುವೆ ಬೆಂಕಿ ಉರಿಸಿ ಒಟ್ಟಾಗಿ ಕೂತು ಕೊಂಡಾಗ ಪೇತ್ರನೂ ಅವರ ನಡುವೆ ಕೂತು ಕೊಂಡನು.

Cross references

ಕೀರ್ತನೆಗಳು 1:1

ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ

ಕೀರ್ತನೆಗಳು 26:4

ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ.

ಕೀರ್ತನೆಗಳು 28:3

ದುಷ್ಟರ ಸಂಗಡಲೂ ಅಪರಾಧಮಾಡುವವರ ಸಂಗಡಲೂ ನನ್ನನ್ನು ಎಳೆಯಬೇಡ; ತಮ್ಮ ನೆರೆಯವರಿಗೆ ಅವರು ಸಮಾಧಾನವಾಗಿ ಮಾತನಾಡುತ್ತಾರೆ; ಕೇಡು ಅವರ ಹೃದಯದಲ್ಲಿ ಅದೆ.

ಸಾಮೇತಿಗಳು 9:6

ಮೂಢರನ್ನು ಬಿಟ್ಟು ಬಾಳು ಮತ್ತು ವಿವೇಕದ ಮಾರ್ಗದಲ್ಲಿ ಹೋಗು ಎಂದೂ ಕೂಗುತ್ತಾಳೆ.

ಸಾಮೇತಿಗಳು 13:20

ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗಿರುವನು. ಬುದ್ಧಿ ಹೀನರ ಜೊತೆಗಾರನು ನಾಶವಾಗುವನು.

ಮತ್ತಾಯ 26:3

ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು

ಮತ್ತಾಯ 26:69

ಆಗ ಪೇತ್ರನು ಭವನದ ಹೊರಗೆ ಕೂತಿರಲು ಒಬ್ಬ ಹುಡುಗಿಯು ಅವನ ಬಳಿಗೆ ಬಂದು-- ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು ಅಂದಳು.

ಮಾರ್ಕ 14:66

ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.

ಲೂಕ 22:44

ಆತನು ವೇದನೆಯಲ್ಲಿದ್ದು ಬಹಳ ಆಸಕ್ತಿ ಯಿಂದ ಪ್ರಾರ್ಥಿಸಿದನು. ಆತನ ಬೆವರು ನೆಲಕ್ಕೆ ಬೀಳುತ್ತಿರುವ ದೊಡ್ಡ ರಕ್ತದ ಹನಿಗಳೋಪಾದಿಯಲ್ಲಿತ್ತು.

ಯೋಹಾನ 18:16

ಪೇತ್ರನು ಬಾಗಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು; ಹೀಗಿರಲಾಗಿ ಮಹಾಯಾಜಕನಿಗೆ ಪರಿಚಯವಿದ್ದ ಆ ಮತ್ತೊಬ್ಬ ಶಿಷ್ಯನು ಹೊರಗೆ ಹೋಗಿ ಬಾಗಲು ಕಾಯುವವಳ ಸಂಗಡ ಮಾತನಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.

ಯೋಹಾನ 18:25

ತರುವಾಯ ಸೀಮೋನ ಪೇತ್ರನು ಚಳಿಕಾಯಿಸಿ ಕೊಳ್ಳುತ್ತಾ ನಿಂತಿದ್ದನು; ಆದದರಿಂದ ಅವರು ಅವ ನಿಗೆ--ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ ಎಂದು ಅವನನ್ನು ಕೇಳಿದರು. ಅದಕ್ಕೆ ಅವನು ಅದನ್ನು ಅಲ್ಲಗಳೆದು--ನಾನಲ್ಲ ಅಂದನು.

1 ಕೊರಿಂಥದವರಿಗೆ 15:33

ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.

2 ಕೊರಿಂಥದವರಿಗೆ 6:15

ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?

Interlinear

Choose Theme