ತರುವಾಯ ಕರ್ತನು--ಸೀಮೋನನೇ, ಸೀಮೋ ನನೇ, ಇಗೋ, ಸೈತಾನನು ನಿಮ್ಮನ್ನು ಗೋಧಿಯಂತೆ ಒನೆಯಬೇಕೆಂದು ಅಪೇಕ್ಷೆಪಟ್ಟಿದ್ದಾನೆ.
Cross references
ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು.
ತಿರಿಗಿ ಒಂದು ದಿನ ಕರ್ತನ ಬಳಿಯಲ್ಲಿ ನಿಂತುಕೊಳ್ಳುವದಕ್ಕೆ ದೇವರ ಪುತ್ರರು ಬಂದಾಗ ಸೈತಾನನು ಸಹ ಅವರ ಸಂಗಡ ಬಂದನು.
ರೊಟ್ಟಿಯ ಕಾಳನ್ನು ಕುಟ್ಟುವನೋ? ಅವನು ಯಾವಾಗಲೂ ಅದನ್ನು ಒಕ್ಕುವದಿಲ್ಲ; ಇಲ್ಲವೇ ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವದಿಲ್ಲ, ಅಥವಾ ಅವನ ಕುದುರೆ ಸವಾರರಿಂದ ಕುಣಿಸುವದಿಲ್ಲ.ಈ ವಿವೇಕವು ಸಹ ಅತಿಶಯಾಲೋಚನಾಪರನೂ ಕಾರ್ಯಸಾಧಕ ಜ್ಞಾನಶ್ರೇಷ್ಠನೂ ಆಗಿರುವ ಸೈನ್ಯಗಳ ಕರ್ತನಿಂದಲೇ ಹೊರಡುತ್ತದೆ.
ಇಗೋ, ಮೊರದಲ್ಲಿ ಧಾನ್ಯವನ್ನು ಕೇರುವಂತೆ ನಾನು ಆಜ್ಞಾಪಿಸಿ ಇಸ್ರಾಯೇಲಿನ ಮನೆತನದವ ರನ್ನು ಎಲ್ಲಾ ಜನಾಂಗಗಳಲ್ಲಿ ಕೇರುವೆನು; ಆದಾಗ್ಯೂ ಒಂದು ಕಾಳಾದರೂ ನೆಲಕ್ಕೆ ಬೀಳುವದಿಲ್ಲ.
ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
ಆದರೆ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ;ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು.
ಆಗ ಅವನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆಪಡಿಸುತ್ತೀ ಎಂದು ಹೇಳುವ ಧ್ವನಿಯನ್ನು ಕೇಳಿದನು.
ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.