ಆದರೆ ಈ ಸಂಗತಿಗಳು ಸಂಭವಿಸುವದಕ್ಕೆ ಪ್ರಾರಂಭಿಸಿದಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆಗಳನ್ನು ಎತ್ತಿರಿ; ಯಾಕಂದರೆ ನಿಮ್ಮ ವಿಮೋಚನೆಯು ಸವಿಾಪವಾಗಿದೆ ಅಂದನು.
Cross references
ಕರ್ತನಿಗೆ ಕಿನ್ನರಿಯಿಂದ, ಹೌದು, ಕಿನ್ನರಿ ಯಿಂದಲೂ ಕೀರ್ತನೆಯ ಸ್ವರದಿಂದಲೂ ಹಾಡಿರಿ.
ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.
ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.
ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?
ದೇವಪುತ್ರರ ಪ್ರತ್ಯಕ್ಷತೆಯನ್ನು ಸೃಷ್ಟಿಯು ಲವಲವಿಕೆಯಿಂದ ಎದುರು ನೋಡುತ್ತಾ ಇದೆ.
ಇದು ಮಾತ್ರವಲ್ಲದೆ ಆತ್ಮನ ಪ್ರಥಮ ಫಲವನ್ನು ಹೊಂದಿದ ನಾವು ಸಹ ದತ್ತುಪುತ್ರ ಸ್ವೀಕಾರವನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೊಡುತ್ತಾ ನಮ್ಮೊಳಗೆ ನಾವೇ ಮೂಲ್ಗುತ್ತೇವೆ.
ಆತನ ಮಹಿಮೆಯ ಸ್ತುತಿಗೋಸ್ಕರ ಕೊಂಡುಕೊಂಡ ಸ್ವಾಸ್ಥ್ಯದವರಿಗೆ ವಿಮೋಚನೆಯಾ ಗುವ ತನಕ ಆತನು (ಪವಿತ್ರಾತ್ಮನು) ನಮ್ಮ ಬಾಧ್ಯತೆಗೆ ಸಂಚಕಾರನಾಗಿದ್ದಾನೆ.
ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.