ಬೋಧಕನೇ, ಹೆಂಡತಿ ಇದ್ದ ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋ ದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದುಕೊಟ್ಟನು.
Cross references
ಆಗ ಯೆಹೂದನು ಓನಾನನಿಗೆ--ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ ಅವಳನ್ನು ಮದುವೆಯಾಗಿ ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡು ಅಂದನು.
ಆಗ ಯೆಹೂದನು ತನ್ನ ಸೊಸೆಯಾದ ತಾಮಾರ ಳಿಗೆ--ನನ್ನ ಮಗನಾದ ಶೇಲಹನು ದೊಡ್ಡವನಾಗುವ ವರೆಗೆ ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿ ಇರು ಅಂದನು. ಯಾಕಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳು ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.
ಆಗ ಯೆಹೂದನು ಅವುಗಳನ್ನು ಗುರುತಿಸಿ--ಆಕೆಯು ನನಗಿಂತ ನೀತಿವಂತಳು, ಯಾಕಂದರೆ ನಾನು ನನ್ನ ಮಗನಾದ ಶೇಲಹನಿಗೆ ಅವಳನ್ನು ಕೊಡಲಿಲ್ಲ ಅಂದನು. ಅವನು ಮತ್ತೆ ಆಕೆಯನ್ನು ಅರಿಯಲಿಲ್ಲ.
ಸಹೋದರರು ಕೂಡಿ ವಾಸಮಾಡುವಾಗ ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ ಆ ಸತ್ತವನ ಹೆಂಡತಿ ಮನೆ ಬಿಟ್ಟು ಅನ್ಯನ ಹೆಂಡತಿಯಾಗಬಾರದು; ಗಂಡನ ಸಹೋದರನು ಅವಳ ಬಳಿಗೆ ಬಂದು ಅವಳನ್ನು ಹೆಂಡತಿಯಾಗಿ ತಕ್ಕೊಂಡು ಗಂಡನ ಸಹೋದರನಿಗೆ ತಕ್ಕ ಹಾಗೆ ಅವಳಿಗೆ ನಡಿಸಬೇಕು.
ಅದಕ್ಕೆ ನೊವೊಮಿಯು ನನ್ನ ಕುಮಾರ್ತೆಯರೇ, ನೀವು ಹಿಂತಿ ರುಗಿ ಹೋಗಿರಿ; ನನ್ನ ಸಂಗಡ ಯಾಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ನನ್ನ ಗರ್ಭದಲ್ಲಿ ನನಗೆ ಕುಮಾರರು ಇಲ್ಲವಲ್ಲಾ!