ಆತನು ಆಡಿದ ಮಾತುಗಳನ್ನು ಕೇಳಿದ ವರೆಲ್ಲರು ಆತನ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾ ದರು.
Cross references
ನನ್ನ ಬೋಧಕರೆಲ್ಲರಿಗಿಂತ ನಾನು ಬುದ್ಧಿವಂತ ನಾಗಿದ್ದೇನೆ; ನಿನ್ನ ಸಾಕ್ಷಿಗಳು ನನ್ನ ಧ್ಯಾನವಾಗಿವೆ.
ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು.
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
ಯೆಹೂ ದ್ಯರು ಆಶ್ಚರ್ಯಪಟ್ಟು--ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಂಥ ಜ್ಞಾನವು ಬಂದಿರುವದು ಹೇಗೆ ಅಂದರು.
ಅದಕ್ಕೆ ಅಧಿಕಾರಿಗಳು ಪ್ರತ್ಯುತ್ತರವಾಗಿ--ಈ ಮನುಷ್ಯನಂತೆ ಯಾವನೂ ಎಂದೂ ಮಾತನಾಡಲಿಲ್ಲ ಅಂದರು.