Home Bibles ☰ Books ಲೂಕ 2:31 · ಕನ್ನಡ ಬೈಬಲ್
ಲೂಕ 2:31 · ಕನ್ನಡ ಬೈಬಲ್

ಅದನ್ನು (ಆ ರಕ್ಷಣೆಯನ್ನು) ನೀನು ಎಲ್ಲಾ ಜನರ ಮುಂದೆ ಸಿದ್ಧ ಪಡಿಸಿದ್ದೀ.

Cross references

ಕೀರ್ತನೆಗಳು 96:1

ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ.

ಕೀರ್ತನೆಗಳು 96:10

ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.

ಕೀರ್ತನೆಗಳು 97:6

ಆಕಾಶಗಳು ಆತನ ನೀತಿಯನ್ನು ತಿಳಿಸುತ್ತವೆ; ಎಲ್ಲಾ ಜನಗಳು ಆತನ ಘನವನ್ನು ನೋಡುತ್ತಾರೆ.

ಕೀರ್ತನೆಗಳು 98:2

ರ್ತನು ತನ್ನ ರಕ್ಷಣೆಯನ್ನು ತಿಳಿಯ ಮಾಡಿದ್ದಾನೆ; ತನ್ನ ನೀತಿಯನ್ನು ಜನಾಂಗಗಳ ದೃಷ್ಟಿಗೆ ಬಹಿರಂಗವಾಗಿ ಪ್ರಕಟಮಾಡಿದ್ದಾನೆ.

ಯೆಶಾಯ 42:1

ಇಗೋ, ನಾನು ಆಧಾರವಾಗಿರುವ ನನ್ನ ಸೇವಕನು; ನಾನು ಆದುಕೊಂಡವನಲ್ಲಿ ನನ್ನ ಆತ್ಮ ಆನಂದಿಸುವದು. ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಅನ್ಯಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.

ಯೆಶಾಯ 42:10

ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.

ಯೆಶಾಯ 45:21

ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ.

ಯೆಶಾಯ 62:1

ಚೀಯೋನಿಗೋಸ್ಕರ ನಾನು ಮೌನವಾಗಿರುವದಿಲ್ಲ; ಯೆರೂಸಲೇಮಿಗೋಸ್ಕರ ಅದರ ನೀತಿ ಪ್ರಕಾಶದಂತೆಯೂ ಅದರ ರಕ್ಷಣೆಯು ಉರಿಯುವ ದೀವಿಗೆಯಂತೆಯೂ ಹೊರಡುವ ವರೆಗೆ ನಾನು ವಿಶ್ರಾಂತಿಯಿಂದ ಇರುವದಿಲ್ಲ.

Interlinear

Choose Theme