Home Bibles ☰ Books ಲೂಕ 2:15 · ಕನ್ನಡ ಬೈಬಲ್
ಲೂಕ 2:15 · ಕನ್ನಡ ಬೈಬಲ್

ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

Cross references

ನಿರ್ಗಮಕಾಂಡ 3:3

ಆಗ ಮೋಶೆಯು--ನಾನು ಹೋಗಿ ಆ ಪೊದೆಯು ಯಾಕೆ ಸುಡದೆ ಇರುವದೆಂಬ ಆಶ್ಚರ್ಯ ವನ್ನು ನೋಡುವೆನು ಅಂದನು.

2 ಅರಸುಗಳು 2:1

ಕರ್ತನು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.

2 ಅರಸುಗಳು 2:11

ಅವರು ನಡೆದು ಬಂದು ಮಾತನಾಡಿಕೊಂಡಿರುವಾಗ ಆದದ್ದೇನಂದರೆ, ಇಗೋ, ಬೆಂಕಿಯ ರಥವೂ ಬೆಂಕಿಯ ಕುದುರೆ ಗಳೂ ಅವರಿಬ್ಬರನ್ನು ವಿಂಗಡಿಸಿದವು; ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.

ಕೀರ್ತನೆಗಳು 111:2

ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.

ಮತ್ತಾಯ 2:1

ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --

ಮತ್ತಾಯ 2:9

ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ, ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು.

ಮತ್ತಾಯ 12:42

ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.

ಲೂಕ 24:51

ಇದಾದ ಮೇಲೆ ಆತನು ಅವರನ್ನು ಆಶೀರ್ವದಿಸುತ್ತಿರುವಾಗ ಆತನು ಅವರಿಂದ ಪ್ರತ್ಯೇಕಿಸಲ್ಪಟ್ಟು ಮೇಲಕ್ಕೆ ಪರಲೋಕದೊಳಗೆ ಒಯ್ಯ ಲ್ಪಟ್ಟನು.

ಯೋಹಾನ 20:1

ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲಿರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯಿಂದ ಕಲ್ಲು ತೆಗೆದುಹಾಕಲ್ಪಟ್ಟಿರುವದನ್ನು ಕಂಡಳು.

1 ಪೇತ್ರ 3:22

ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೂತರೂ ಪ್ರಭುತ್ವ ಗಳೂ ಅಧಿಕಾರಗಳೂ ಆತನಿಗೆ ಅಧೀನ ಮಾಡಲ್ಪಟ್ಟಿದ್ದಾರೆ.

Interlinear

Choose Theme