ಇದನ್ನು ಅವರು ನೋಡಿ ದಾಗ--ಇವನು ಪಾಪಿಯಾದವನೊಂದಿಗೆ ಅತಿಥಿ ಯಾಗಿರಲು ಹೋಗಿದ್ದಾನೆ ಎಂದು ಹೇಳಿ ಅವರೆಲ್ಲರೂ ಗುಣುಗುಟ್ಟಿದರು.
Cross references
ಫರಿಸಾ ಯರು ಅದನ್ನು ನೋಡಿ ಆತನ ಶಿಷ್ಯರಿಗೆ--ನಿಮ್ಮ ಬೋಧಕನು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟ ಮಾಡುತ್ತಾನೆ ಎಂದು ಕೇಳಿದರು.
ಅವರಿಗೆ--ನೀವು ಸಹ ದ್ರಾಕ್ಷೇ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುವೆನು ಎಂದು ಹೇಳಿದನು. ಆಗ ಅವರು ಹೊರಟು ಹೋದರು.
ನೀವು ನೆನಸುವದೇನು? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು; ಅವನು ಮೊದಲನೆಯವನ ಬಳಿಗೆ ಬಂದು--ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷೇತೋಟದಲ್ಲಿ ಕೆಲಸಮಾಡು ಎಂದು ಹೇಳಿದನು.
ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
ಮನುಷ್ಯಕುಮಾರನು ತಿನ್ನು ವವನಾಗಿಯೂ ಕುಡಿಯುವವನಾಗಿಯೂ ಬಂದನು; ಆದರೆ ನೀವು--ಇಗೋ, ಹೊಟ್ಟೇಬಾಕನು, ಕುಡು ಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು ಅನ್ನುತ್ತೀರಿ.
ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.
ಫರಿಸಾಯರು ಮತ್ತು ಶಾಸ್ತ್ರಿಗಳು--ಇವನು ಪಾಪಿಗಳನ್ನು ಅಂಗೀಕರಿಸಿ ಅವರೊಂದಿಗೆ ಊಟ ಮಾಡುತ್ತಾನೆ ಎಂದು ಹೇಳುತ್ತಾ ಗುಣುಗುಟ್ಟಿದರು.
ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.