Home Bibles ಲೂಕ 19:5 · ಕನ್ನಡ ಬೈಬಲ್
ಲೂಕ 19:5 · ಕನ್ನಡ ಬೈಬಲ್

ಯೇಸು ಆ ಸ್ಥಳಕ್ಕೆ ಬಂದು ಮೇಲಕ್ಕೆ ನೋಡಿ ಅವನನ್ನು ಕಂಡು ಅವನಿಗೆ--ಜಕ್ಕಾಯನೇ, ತ್ವರೆಯಾಗಿ ಇಳಿದು ಬಾ; ಯಾಕಂದರೆ ಈ ದಿನ ನಾನು ನಿನ್ನ ಮನೆಯಲ್ಲಿ ಇರತಕ್ಕದ್ದಾಗಿದೆ ಅಂದನು.

Cross references

ಆದಿಕಾಂಡ 18:3

ನನ್ನ ಕರ್ತನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರೆತಿದ್ದರೆ ನಿನ್ನ ದಾಸನ ಬಳಿಯಿಂದ ಹೊರಟುಹೋಗಬೇಡ.

ಆದಿಕಾಂಡ 19:1

ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮ್‌ಗೆ ಬಂದಾಗ ಲೋಟನು ಸೊದೋ ಮ್‌ನ ಬಾಗಲಲ್ಲಿ ಕೂತಿದ್ದನು. ಲೋಟನು ಅವರನ್ನು ಎದುರುಗೊಳ್ಳುವದಕ್ಕೆ ಎದ್ದು ನೆಲದ ಮಟ್ಟಿಗೆ ಬೊಗ್ಗಿ

ಕೀರ್ತನೆಗಳು 101:2

ಸಂಪೂರ್ಣವಾದ ಮಾರ್ಗದಲ್ಲಿ ಬುದ್ಧಿ ಯಿಂದ ನಡೆದು ಕೊಳ್ಳುವೆನು; ಯಾವಾಗ ನನ್ನ ಬಳಿಗೆ ಬರುವಿ? ನನ್ನ ಹೃದಯದ ಸಂಪೂರ್ಣತೆಯಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.

ಕೀರ್ತನೆಗಳು 139:1

ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ;

ಸಭಾಪ್ರಸಂಗಿ 9:10

ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.

ಯೆಹೆಜ್ಕೇಲ 16:6

ನಾನು ನಿನ್ನ ಬಳಿಯಲ್ಲಿ ಹಾದು ಹೋಗುವಾಗ ನೀನು ನಿನ್ನ ಸ್ವಂತ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದ ನಿನ್ನನ್ನು ನಾನು ನಿನ್ನ ರಕ್ತದಲ್ಲಿ ನೋಡಿದಾಗ ಬದುಕು ಎಂದೆನು; ಹೌದು, ನೀನು ನಿನ್ನ ರಕ್ತದಲ್ಲಿ ಬಿದ್ದಿರುವಾಗ ನಾನು ಬದುಕು ಅಂದೆನು.

ಲೂಕ 19:10

ಯಾಕಂದರೆ ಮನುಷ್ಯಕುಮಾರನು ತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.

ಯೋಹಾನ 1:48

ನತಾನಯೇಲನು ಆತನಿಗೆ--ನೀನು ನನ್ನನ್ನು ಹೇಗೆ ಬಲ್ಲೆ? ಅಂದನು; ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರ ಮರದ ಕೆಳಗೆ ಇದ್ದಾಗ ನಾನು ನಿನ್ನನ್ನು ನೋಡಿದೆನು ಅಂದನು.

ಯೋಹಾನ 4:7

ಆಗ ಸಮಾರ್ಯದ ಒಬ್ಬ ಸ್ತ್ರೀಯು ನೀರು ಸೇದುವದಕ್ಕಾಗಿ ಬಂದಳು; ಯೇಸು ಆಕೆಗೆ--ನನಗೆ ಕುಡಿಯುವದಕ್ಕೆ ಕೊಡು ಅಂದನು.

ಯೋಹಾನ 14:23

ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯಾವನಾ ದರೂ ನನ್ನನ್ನು ಪ್ರೀತಿಸುವದಾದರೆ ಅವನು ನನ್ನ ಮಾತುಗಳನ್ನು ಕೈಕೊಳ್ಳುವನು; ನನ್ನ ತಂದೆಯು ಅವ ನನ್ನು ಪ್ರೀತಿಸುವನು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಮ್ಮ ನಿವಾಸವನ್ನು ಮಾಡಿ ಕೊಳ್ಳುವೆವು.

2 ಕೊರಿಂಥದವರಿಗೆ 6:1

ಆದದರಿಂದ ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದೇವೆ; ನೀವು ಸಹ ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿ ಕೊಳ್ಳಬೇಡಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.

ಎಫೆಸದವರಿಗೆ 3:17

ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ನಂಬಿಕೆಯ ಮೂಲಕ ವಾಸಿಸುವಂತೆಯೂ ನೀವು ಪ್ರೀತಿಯಲಿ ಬೇರೂರಿ ನೆಲೆಗೊಂಡು ನಿಂತು

ಹೆಬ್ರಿಯರಿಗೆ 13:2

ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.

ಪ್ರಕಟನೆ 3:20

ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.

Interlinear

Choose Theme