Home Bibles ಲೂಕ 19:30 · ಕನ್ನಡ ಬೈಬಲ್
ಲೂಕ 19:30 · ಕನ್ನಡ ಬೈಬಲ್

ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ನೀವು ಅದ ರೊಳಗೆ ಪ್ರವೇಶಿಸುತ್ತಿರುವಾಗ ಅಲ್ಲಿ ಕಟ್ಟಿರುವ ಮತ್ತು ಯಾವ ಮನುಷ್ಯನೂ ಅದರ ಮೇಲೆ ಹತ್ತದಿರುವ ಒಂದು ಕತ್ತೇ ಮರಿಯನ್ನು ಕಾಣುವಿರಿ; ಅದನ್ನು ಬಿಚ್ಚಿ ಇಲ್ಲಿಗೆ ತಕ್ಕೊಂಡು ಬನ್ನಿರಿ;

Cross references

1 ಸಮುವೇಲ 10:2

ನೀನು ಈ ಹೊತ್ತು ನನ್ನನ್ನು ಬಿಟ್ಟು ಹೋದಾಗ ಬೆನ್ಯಾವಿಾನನ ಮೇರೆಯಾದ ಚೆಲ್ಚಹಿ ನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವಿ. ಅವರು ನಿನಗೆ--ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು; ಇದಲ್ಲದೆ ಇಗೋ, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು ನಿನಗೋಸ್ಕರ ಚಿಂತೆಪಟ್ಟು--ನನ್ನ ಮಗನಿಗೋ ಸ್ಕರ ಏನು ಮಾಡಲಿ? ಅನ್ನುತ್ತಾನೆಂದು ಹೇಳುವರು.

ಲೂಕ 19:32

ಕಳುಹಿಸಲ್ಪಟ್ಟವರು ತಮ್ಮ ಮಾರ್ಗವಾಗಿ ಹೊರಟು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು.

ಲೂಕ 22:8

ಆತನು ಪೇತ್ರ ಯೋಹಾನರನ್ನು ಕಳುಹಿಸಿ--ನಾವು ಊಟ ಮಾಡುವಂತೆ ಹೋಗಿ ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ ಅಂದನು.

ಯೋಹಾನ 14:29

ಅದು ನಡೆಯುವಾಗ ನೀವು ನಂಬುವಂತೆ ನಡೆಯು ವದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.

Interlinear

Choose Theme