Home Bibles ಲೂಕ 18:41 · ಕನ್ನಡ ಬೈಬಲ್
ಲೂಕ 18:41 · ಕನ್ನಡ ಬೈಬಲ್

ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಿದನು. ಅದಕ್ಕವನು--ಕರ್ತನೇ, ನಾನು ದೃಷ್ಟಿಹೊಂದುವಂತೆ ಮಾಡು ಅಂದನು.

Cross references

1 ಅರಸುಗಳು 3:5

ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿ ಯಲ್ಲಿ ಸ್ವಪ್ನದೊಳಗೆ ಕರ್ತನು ಸೊಲೊಮೋನನಿಗೆ ಕಾಣಿಸಿಕೊಂಡನು. ದೇವರು ಅವನಿಗೆ--ನಾನು ನಿನಗೆ ಏನು ಕೊಡಬೇಕು ಕೇಳಿಕೋ ಅಂದನು.

ಮತ್ತಾಯ 20:21

ಆತನು ಆಕೆಗೆ--ನೀನು ಏನು ಅಪೇಕ್ಷಿಸುತ್ತೀ ಎಂದು ಕೇಳಲು ಆಕೆಯು ಆತನಿಗೆ -- ನಿನ್ನ ರಾಜ್ಯದಲ್ಲಿ ಈ ನನ್ನ ಇಬ್ಬರು ಕುಮಾರರು ಒಬ್ಬನು ನಿನ್ನ ಬಲಗಡೆಯಲ್ಲೂ ಇನ್ನೊಬ್ಬನು ನಿನ್ನ ಎಡಗಡೆಯಲ್ಲೂ ಕೂತುಕೊಳ್ಳುವಂತೆ ಅನುಗ್ರಹಿಸ ಬೇಕು ಎಂದು ಬೇಡಿಕೊಂಡಳು.

ರೋಮಾಪುರದವರಿಗೆ 8:25

ಕಾಣದಿರುವದನ್ನು ನಾವು ನಿರೀಕ್ಷಿಸುವದಾಗಿದ್ದರೆ ಅದಕ್ಕಾಗಿ ನಾವು ತಾಳ್ಮೆ ಯಿಂದ ಕಾದುಕೊಂಡಿರುತ್ತೇವೆ.

ಫಿಲಿಪ್ಪಿಯವರಿಗೆ 4:6

ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.

Interlinear

Choose Theme