Home Bibles ಲೇವ್ಯಕಾಂಡ 9:7 · ಕನ್ನಡ ಬೈಬಲ್
ಲೇವ್ಯಕಾಂಡ 9:7 · ಕನ್ನಡ ಬೈಬಲ್

ಮೋಶೆಯು ಆರೋನನಿಗೆ--ಯಜ್ಞವೇದಿಯ ಹತ್ತಿರಕ್ಕೆ ಹೋಗಿ ಕರ್ತನು ಆಜ್ಞಾಪಿಸಿದಂತೆಯೇ ನಿನ್ನ ಪಾಪದಬಲಿಯನ್ನೂ ದಹನಬಲಿಯನ್ನೂ ಅರ್ಪಿಸಿ, ನಿನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು; ಜನರ ಸಮರ್ಪಣೆಗಳನ್ನು ಸಮರ್ಪಿಸಿ ಅವರಿ ಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು ಅಂದನು.

Cross references

ಲೇವ್ಯಕಾಂಡ 4:3

ಜನರು ಪಾಪಮಾಡುವ ಹಾಗೆ ಅಭಿಷಿಕ್ತನಾದ ಯಾಜಕನು ಪಾಪಮಾಡಿದರೆ ಅವನು ತನ್ನ ಪಾಪಕ್ಕಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನು ಪಾಪದ ಬಲಿಗಾಗಿ ಕರ್ತನಿಗೆ ತರಬೇಕು.

ಲೇವ್ಯಕಾಂಡ 4:16

ಅಭಿಷಿಕ್ತ ನಾದ ನಿಮ್ಮ ಯಾಜಕನು ಆ ಹೋರಿಯ ರಕ್ತವನ್ನು ಸಭೆಯ ಗುಡಾರಕ್ಕೆ ತರಬೇಕು.

ಲೇವ್ಯಕಾಂಡ 8:34

ಈ ದಿನದಲ್ಲಿ ಅವನು ಮಾಡಿದ ಹಾಗೆ ಪಾಪ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನು ಆಜ್ಞಾಪಿಸಿದ್ದಾನೆ.

ಲೇವ್ಯಕಾಂಡ 9:2

ಅವನು ಆರೋನನಿಗೆ ಹೇಳಿದ್ದೇನಂದರೆ--ಪಾಪದ ಬಲಿಗಾಗಿ ಒಂದು ಎಳೆಯ ಕರುವನ್ನೂ ದಹನ ಬಲಿಗಾಗಿ ದೋಷವಿಲ್ಲದ ಟಗರನ್ನೂ ನೀನು ತೆಗೆದು ಕೊಂಡು ಅವುಗಳನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸು.

ಲೇವ್ಯಕಾಂಡ 16:6

ಇದಲ್ಲದೆ ಆರೋನನು ತನಗೋಸ್ಕರ ಪಾಪಬಲಿ ಗಾಗಿ ತನ್ನ ಹೋರಿಯನ್ನು ಸಮರ್ಪಿಸಿ ತನ್ನ ಮನೆಯ ವರಿಗೋಸ್ಕರವೂ ಪ್ರಾಯಶ್ಚಿತ್ತಮಾಡಬೇಕು.

ಲೇವ್ಯಕಾಂಡ 16:11

ಇದಲ್ಲದೆ ಆರೋನನು ಪಾಪಬಲಿಗಾಗಿರುವ ಹೋರಿಯನ್ನು ತನಗೋಸ್ಕರವೂ ತನ್ನ ಮನೆತನದವರಿ ಗೋಸ್ಕರವೂ ಪ್ರಾಯಶ್ಚಿತ್ತಮಾಡಿ, ಪಾಪಬಲಿಗಾಗಿ ಆ ಹೋರಿಯನ್ನು ವಧಿಸಬೇಕು.

ಲೇವ್ಯಕಾಂಡ 16:24

ಅವನು ಪರಿಶುದ್ಧ ಸ್ಥಳದಲ್ಲಿ ತನ್ನ ಶರೀರವನ್ನು ನೀರಿನಿಂದ ತೊಳೆದು ತನ್ನ ಬಟ್ಟೆಗಳನ್ನು ಧರಿಸಿಕೊಂಡು ಹೊರಗೆ ಬಂದು ತನ್ನ ದಹನಬಲಿಯನ್ನೂ ಜನರ ದಹನಬಲಿಯನ್ನೂ ಸಮ ರ್ಪಿಸಿ ತನಗೋಸ್ಕರವೂ ಜನರಿಗೋಸ್ಕರವೂ ಪ್ರಾಯ ಶ್ಚಿತ್ತಮಾಡಬೇಕು.

1 ಸಮುವೇಲ 3:14

ಆದದರಿಂದ ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿ ಯಿಂದಲಾದರೂ ಅರ್ಪಣೆಯಿಂದಲಾದರೂ ಶುದ್ಧ ಮಾಡಲ್ಪಡುವದಿಲ್ಲ ಎಂದು ನಾನು ಏಲಿಯ ಮನೆ ಯನ್ನು ಕುರಿತು ಆಣೆ ಇಟ್ಟೆನು ಅಂದನು.

ಹೆಬ್ರಿಯರಿಗೆ 5:1

ಪ್ರತಿಯೊಬ್ಬ ಮಹಾಯಾಜಕನು ಮನುಷ್ಯ ರೊಳಗಿಂದ ಆರಿಸಲ್ಪಟ್ಟು ಮನುಷ್ಯರಿ ಗೋಸ್ಕರ ದೇವರ ಕಾರ್ಯಗಳಿಗಾಗಿ ನೇಮಿಸಲ್ಪಡು ತ್ತಾನಲ್ಲಾ. ಅವನು ಕಾಣಿಕೆಗಳನ್ನೂ ಯಜ್ಞಗಳನ್ನೂ ಪಾಪಗಳಿಗೋಸ್ಕರ ಸಮರ್ಪಿಸಬೇಕು.

ಹೆಬ್ರಿಯರಿಗೆ 5:3

ಆ ಬಲಹೀನತೆಯ ಕಾರಣದಿಂದ ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಅರ್ಪಿಸಬೇಕಾದವ ನಾಗಿದ್ದಾನೆ.

ಹೆಬ್ರಿಯರಿಗೆ 7:27

ಮೊದಲು ತನ್ನ ಸ್ವಂತ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪ ಪರಿಹಾರಕ್ಕಾಗಿ ಯಜ್ಞಾರ್ಪಣೆ ಮಾಡುವ ಮಹಾ ಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸ ಬೇಕಾದ ಅವಶ್ಯವಿಲ್ಲ. ಯಾಕಂದರೆ ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.ನ್ಯಾಯಪ್ರಮಾಣವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ಮಾಡುತ್ತದೆ; ಆದರೆ ನ್ಯಾಯಪ್ರಮಾಣದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಪ್ರತಿಷ್ಠೆ ಮಾಡಿಕೊಂಡ ಮಗನನ್ನೇ ಮಹಾಯಾಜಕ ನನ್ನಾಗಿ ಮಾಡುತ್ತದೆ.

ಹೆಬ್ರಿಯರಿಗೆ 9:7

ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರುಷಕ್ಕೆ ಒಂದೇ ಸಾರಿ ಹೋಗುತ್ತಾನೆ. ಅವನು ರಕ್ತವನ್ನು ತಕ್ಕೊಳ್ಳದೆ ಹೋಗುವದಿಲ್ಲ; ಆ ರಕ್ತವನ್ನು ತನ ಗೋಸ್ಕರವೂ ಜನರ ತಪ್ಪುಗಳಿಗೋಸ್ಕರವೂ ಸಮರ್ಪಿಸುತ್ತಾನೆ.

Interlinear

Choose Theme