ಅದರಂತೆಯೇ ಅತಿಕ್ರಮ ಬಲಿಯ ನಿಯಮವು ಇದೇ: ಇದು ಅತಿ ಪರಿಶುದ್ಧ ವಾದದ್ದು.
Cross references
ಯಾವನಾದರೂ ಆಣೆಯಿಡುವದನ್ನು ಕೇಳಿ ಸಾಕ್ಷಿಯಾಗಿದ್ದು ಪಾಪಮಾಡಿದರೆ ಅವನು ಅದನ್ನು ನೋಡಿಯೂ ಇಲ್ಲವೆ ತಿಳಿದೂ ಹೇಳದಿದ್ದರೆ ಅವನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು.
ಅವನು ತಾನು ಮಾಡಿದ ಪಾಪಕ್ಕಾಗಿ ಕರ್ತನಿಗೆ ಅಪರಾಧ ಬಲಿಯನ್ನು ಪಾಪದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣುಕುರಿ ಇಲ್ಲವೆ ಮೇಕೆಗಳಲ್ಲಿ ಒಂದು ಮರಿಯನ್ನು ತರಬೇಕು; ಯಾಜಕನು ಅವನ ಪಾಪದ ವಿಷಯದಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಪಾಪದ ಬಲಿಗೆ ತಂದಿರುವದನ್ನು ಮೊದಲು ಸಮರ್ಪಿಸಿ ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು, ಅದನ್ನು ವಿಭಾಗಿಸಬಾರದು.
ಆದರೆ ಅವನು ಎರಡು ಬೆಳವಗಳನ್ನಾಗಲಿ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವದಕ್ಕೆ ಅಶಕ್ತನಾಗಿದ್ದರೆ ಪಾಪಮಾಡಿದವನು ತನ್ನ ಸಮರ್ಪಣೆ ಗಾಗಿ ಒಂದು ಎಫದ ಹತ್ತನೆಯ ಭಾಗದಷ್ಟು ನಯ ವಾದ ಹಿಟ್ಟನ್ನು ಪಾಪದ ಬಲಿಗಾಗಿ ತರಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಅದು ಪಾಪದ ಬಲಿಯಾಗಿದೆ.
ಕರ್ತನು ಮೋಶೆಯೊಂದಿಗೆ ಮಾತನಾಡಿ--
ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ನಾನು ಅದನ್ನು ಅವರಿಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆ ಗಳಲ್ಲಿ ಅವರ ಪಾಲನ್ನು ಅವರಿಗೆ ಕೊಟ್ಟಿದ್ದೇನೆ. ಅದು ಅತಿಕ್ರಮದ ಬಲಿಯ ಹಾಗೆಯೂ ಪಾಪದ ಬಲಿಯ ಹಾಗೆಯೂ ಅತಿ ಪರಿಶುದ್ಧವಾದದ್ದು.
ಆರೋನನಿಗೂ ಅವನ ಕುಮಾರರಿಗೂ ಹೇಳಬೇಕಾ ದದ್ದೇನಂದರೆ, ಪಾಪದ ಬಲಿಯ ನಿಯಮವು ಇದೇ. ದಹನಬಲಿಯು ವಧಿಸಲ್ಪಡುವ ಸ್ಥಳದಲ್ಲಿ ಪಾಪದ ಬಲಿಯೂ ಕರ್ತನ ಸನ್ನಿಧಿಯಲ್ಲಿ ವಧಿಸಲ್ಪಡ ಬೇಕು; ಅದು ಅತಿ ಪರಿಶುದ್ಧವಾದದ್ದು.
ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಂಡು ಅಪರಾಧ ಬಲಿಗಾಗಿ ಸಮರ್ಪಿಸಿ ಅವುಗಳನ್ನು ಆಡಿಸುವ ಸಮರ್ಪಣೆಗಾಗಿ ಕರ್ತನ ಎದುರಿನಲ್ಲಿ ಆಡಿಸಬೇಕು.
ಅವನು ಅಪರಾಧ ಬಲಿಯ ಟಗರಾದ ತನ್ನ ಅಪರಾಧ ಬಲಿಯನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಎದುರಿನಲ್ಲಿ ತರಬೇಕು.
ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು.
ಅವನು ಪ್ರತ್ಯೇಕಿಸಲ್ಪಟ್ಟ ತನ್ನ ದಿವಸಗಳನ್ನು ಕರ್ತನಿಗೆ ಪ್ರತ್ಯೇಕಿಸಿ ಅಪರಾಧ ಬಲಿಯಾಗಿ ಒಂದು ವರುಷದ ಕುರಿಮರಿ ಯನ್ನು ತರಬೇಕು; ಆದರೆ ಮೊದಲಿನ ದಿವಸಗಳು ವ್ಯರ್ಥವಾಗುವವು; ಅವನು ಪ್ರತ್ಯೇಕಿಸಲ್ಪಟ್ಟದ್ದು ಅಶುದ್ಧವಾಯಿತು.
ಇದಲ್ಲದೆ ಲೇವಿಯನಾಗಿರುವ ಇಮ್ನನ ಮಗನಾದ ಕೋರೆ ಎಂಬವನು ಪೂರ್ವದಿಕ್ಕಿ ನಲ್ಲಿರುವ ದ್ವಾರಪಾಲಕನು ಕರ್ತನ ಕಾಣಿಕೆಗಳನ್ನೂ ಮಹಾ ಪರಿಶುದ್ಧವಾದವುಗಳನ್ನೂ ಪಾಲು ಹಂಚುವ ದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಅರ್ಪಣೆ ಗಳ ಮೇಲೆ ಇದ್ದನು.
ಬಾಗಲ ದ್ವಾರಾಂಗಣದಲ್ಲಿ ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿ ಯನ್ನೂ ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.
ಆಹಾರದ ಅರ್ಪಣೆಯನ್ನು ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ಅವರು ತಿನ್ನಬೇಕು; ಇಸ್ರಾಯೇಲಿನಲ್ಲಿ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
ಆಗ ಅವನು ನನಗೆ--ಯಾಜಕರು ಅಪರಾಧ ಬಲಿಯನ್ನೂ ಪಾಪ ಬಲಿಯನ್ನೂ ಬೇಯಿಸಿದ ಆಹಾರದ ಅರ್ಪಣೆಯನ್ನು ಸುಡುವಂತೆ ಏರ್ಪಡಿ ಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡು ವದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದನು.