Home Bibles ಲೇವ್ಯಕಾಂಡ 5:9 · ಕನ್ನಡ ಬೈಬಲ್
ಲೇವ್ಯಕಾಂಡ 5:9 · ಕನ್ನಡ ಬೈಬಲ್

ಇದಲ್ಲದೆ ಅವನು ಪಾಪದ ಬಲಿಯ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಯಜ್ಞವೇದಿಯ ಬದಿಯಲ್ಲಿ ಹಿಂಡಬೇಕು; ಅದು ಪಾಪದ ಬಲಿಯಾಗಿದೆ.

Cross references

ನಿರ್ಗಮಕಾಂಡ 12:22

ಹಿಸ್ಸೋಪಿನ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿ ಲಿನ ಮೇಲಿನ ಅಡ್ಡಗಂಬಕ್ಕೂ ಪಕ್ಕದಲ್ಲಿರುವ ಎರಡು ನಿಲುವುಗಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವ ವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೋಗಬಾರದು.

ಲೇವ್ಯಕಾಂಡ 1:5

ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.

ಲೇವ್ಯಕಾಂಡ 1:15

ಆಗ ಯಾಜಕನು ಅದನ್ನು ಯಜ್ಞವೇದಿಯ ಬಳಿಗೆ ತಂದು ಅದರ ತಲೆಯನ್ನು ಮುರಿದು ಯಜ್ಞವೇದಿಯ ಮೇಲೆ ಸುಡಬೇಕು; ಅದರ ರಕ್ತವನ್ನು ಯಜ್ಞವೇದಿಯ ಹೊರಬದಿಯಲ್ಲಿ ಹಿಂಡಬೇಕು.

ಲೇವ್ಯಕಾಂಡ 4:7

ಯಾಜಕನು ಸ್ವಲ್ಪ ರಕ್ತವನ್ನು ಸಭೆಯ ಗುಡಾರ ದೊಳಗಿರುವ ಸುವಾಸನೆಯುಳ್ಳ ಧೂಪ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಮುಂದೆ ಹಚ್ಚಬೇಕು; ಅಲ್ಲದೆ ಆ ಹೋರಿಯ ಎಲ್ಲಾ ರಕ್ತವನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.

ಲೇವ್ಯಕಾಂಡ 4:18

ಇದಲ್ಲದೆ ಅವನು ಸ್ವಲ್ಪ ರಕ್ತ ವನ್ನು ಸಭೆಯ ಗುಡಾರದೊಳಗಿರುವ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಎದುರಿನಲ್ಲಿ ಹಚ್ಚಿ ಉಳಿದ ಎಲ್ಲಾ ರಕ್ತವನ್ನು ಸಭೆಯ ಗುಡಾರದೊಳಗಿರುವ ದಹನ ಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.

ಲೇವ್ಯಕಾಂಡ 4:25

ಯಾಜಕನು ಪಾಪದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳ ಮೇಲೆ ಹಚ್ಚಿ ಅದರ ರಕ್ತವನ್ನು ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.

ಲೇವ್ಯಕಾಂಡ 4:30

ಆಗ ಯಾಜಕನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು ದಹನ ಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಉಳಿದ ಎಲ್ಲಾ ರಕ್ತವನ್ನು ಆ ಯಜ್ಞವೇದಿಯ ಅಡಿಯಲ್ಲಿ ಹೊಯ್ಯ ಬೇಕು.

ಲೇವ್ಯಕಾಂಡ 4:34

ಯಾಜಕನು ಅದರ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚ ಬೇಕು. ಉಳಿದ ಎಲ್ಲಾ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು.ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.

ಲೇವ್ಯಕಾಂಡ 7:2

ದಹನಬಲಿಯನ್ನು ವಧಿಸಿದ ಸ್ಥಳದಲ್ಲಿಯೇ ಅತಿಕ್ರಮದ ಬಲಿಯನ್ನು ವಧಿಸಬೇಕು: ಅವನು ಅದರ ರಕ್ತವನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸ ಬೇಕು.

ಯೆಶಾಯ 42:21

ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.

ಹೆಬ್ರಿಯರಿಗೆ 2:10

ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.

ಹೆಬ್ರಿಯರಿಗೆ 12:24

ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.

Interlinear

Choose Theme