ಅವನು ಇವುಗಳಲ್ಲೊಂದ ರಲ್ಲಿ ಅಪರಾಧಿಯಾಗಿದ್ದು ತಾನು ಅದರಲ್ಲಿ ಪಾಪಮಾಡಿ ದ್ದೇನೆಂದು ಅರಿಕೆ ಮಾಡುವದಾದರೆ
Cross references
ಆರೋನನು ಆ ಜೀವವುಳ್ಳ ಆಡಿನ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು ಇಸ್ರಾಯೇಲ್ ಮಕ್ಕಳ ಎಲ್ಲಾ ಅಕ್ರಮಗಳನ್ನೂ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆ ಮಾಡಿ ಅವುಗಳನ್ನು ಆಡಿನ ತಲೆಯ ಮೇಲೆ ಇರಿಸಿ ಯೋಗ್ಯನಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.
ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ
ಆಗ ಅವರು ಮಾಡಿದ ಪಾಪವನ್ನು ಅರಿಕೆಮಾಡಿ ಅವರ ಅಪರಾಧದ ಬದಲು ಕೊಟ್ಟು ಅದರ ಸಂಗಡ ಐದನೇ ಪಾಲನ್ನು ಕೂಡಿಸಿ ಯಾರಿಗೆ ಅಪರಾಧ ಮಾಡಿ ದರೋ ಅವರಿಗೆ ಕೊಡಬೇಕು.
ಆಗ ಯೆಹೋಶುವನು ಆಕಾನನಿಗೆ--ನನ್ನ ಮಗನೇ, ನೀನು ಈಗ ಇಸ್ರಾ ಯೇಲಿನ ದೇವರಾದ ಕರ್ತನನ್ನು ಘನಪಡಿಸಿ ಆತನಿಗೆ ಅರಿಕೆಮಾಡು; ಏನು ಮಾಡಿದಿಯೋ ಅದನ್ನು ನನಗೆ ತಿಳಿಸು; ನನಗೆ ಮರೆಮಾಡಬೇಡ ಅಂದನು.
ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.
ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ;
ನನ್ನ ಪಾಪವನ್ನು ನಿನಗೆ ತಿಳಿಸಿದೆನು. ನನ್ನ ಅಪರಾಧವನ್ನು ಮುಚ್ಚಲಿಲ್ಲ. ನನ್ನ ದ್ರೋಹಗಳನ್ನು ಕುರಿತು ಕರ್ತನಿಗೆ ಅರಿಕೆಮಾಡುವೆನೆಂದು ಹೇಳಿದೆನು; ಆಗ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ--ಸೆಲಾ.
ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ.
ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ,
ಹೃದಯದಿಂದ ನಂಬುವದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.
ನಮ್ಮಲ್ಲಿ ಪಾಪವಿಲ್ಲ ವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸ ಪಡಿಸಿಕೊಳ್ಳುತ್ತೇವೆ, ಸತ್ಯವು ನಮ್ಮಲ್ಲಿಲ್ಲ.