Home Bibles ಲೇವ್ಯಕಾಂಡ 26:46 · ಕನ್ನಡ ಬೈಬಲ್
ಲೇವ್ಯಕಾಂಡ 26:46 · ಕನ್ನಡ ಬೈಬಲ್

ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್‌ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ.

Cross references

ಲೇವ್ಯಕಾಂಡ 7:38

ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್‌ ಮಕ್ಕಳು ಕರ್ತನಿಗೆ ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಇವುಗಳನ್ನು ಕರ್ತನು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಆಜ್ಞಾಪಿಸಿದನು.

ಲೇವ್ಯಕಾಂಡ 8:36

ಕರ್ತನು ಮೋಶೆಯ ಕೈಗೆ ಒಪ್ಪಿಸಿ ಆಜ್ಞಾಪಿಸಿದ ಪ್ರಕಾರವೇ ಎಲ್ಲವುಗಳನ್ನು ಆರೋನನೂ ಅವನ ಕುಮಾರರೂ ಮಾಡಿದರು.

ಲೇವ್ಯಕಾಂಡ 25:1

ತರುವಾಯ ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇ ನಂದರೆ--

ಲೇವ್ಯಕಾಂಡ 27:34

ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್‌ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.

ಅಂಕೆಗಳ ಪುಸ್ತಕ 4:37

ಮೋಶೆಗೆ ಕರ್ತನು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸದ ಕೆಹಾತಿಯರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ.

ದ್ವಿತೀಯೋಪದೇಶಕಾಂಡ 6:1

ನೀವು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಮಾಡತಕ್ಕವುಗಳು;

ದ್ವಿತೀಯೋಪದೇಶಕಾಂಡ 12:1

ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿನ್ನ ಪಿತೃಗಳ ದೇವರಾದ ಕರ್ತನು ಕೊಡುವ ದೇಶದಲ್ಲಿ ನೀವು ಭೂಮಿಯ ಮೇಲೆ ಬದುಕುವ ದಿವಸಗಳಲ್ಲೆಲ್ಲಾ ಲಕ್ಷಿಸಿ ಮಾಡತಕ್ಕ ನಿಯಮ ನ್ಯಾಯಗಳು ಇವೇ.

ದ್ವಿತೀಯೋಪದೇಶಕಾಂಡ 13:4

ನಿಮ್ಮ ದೇವರಾದ ಕರ್ತನನ್ನೇ ಅನುಸರಿಸಿ ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಂಡು ಆತನ ಸ್ವರವನ್ನು ಕೇಳಿ ಆತನಿಗೆ ಸೇವೆಮಾಡಿ ಆತನಿಗೆ ಅಂಟಿಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 33:4

ಮೋಶೆ ನಮಗೆ ನ್ಯಾಯಪ್ರಮಾಣವನ್ನು ಆಜ್ಞಾಪಿ ಸಿದ್ದಾನೆ. ಅದೇ ಯಾಕೋಬನ ಸಭೆಯ ಬಾಧ್ಯತೆಯು.

ಕೀರ್ತನೆಗಳು 77:20

ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.

ಯೋಹಾನ 1:17

ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.

Interlinear

Choose Theme