ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿ ಕೊಳ್ಳಬಾರದು. ತಮ್ಮ ಶರೀರವನ್ನು ಕೊಯ್ದುಕೊಳ್ಳ ಬಾರದು.
Cross references
ಮೋಶೆಯು ಆರೋನನಿಗೂ ಅವನ ಕುಮಾರ ರಾದ ಎಲ್ಲಾಜಾರ್‌ನಿಗೂ ಈತಾಮಾರ್‌ನಿಗೂ ಹೇಳಿದ್ದೇ ನಂದರೆ--ನೀವು ಸಾಯದಂತೆಯೂ ಕೋಪವು ಜನ ರೆಲ್ಲರ ಮೇಲೆ ಬಾರದಂತೆಯೂ ನಿಮ್ಮ ತಲೆಗಳನ್ನು ಮುಚ್ಚಿಕೊಳ್ಳಿರಿ, ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದು ಕೊಳ್ಳಬೇಡಿರಿ; ಆದರೆ ಕರ್ತನು ಉರಿಸಿದ ನಿಮ್ಮ ಉರಿಯ ನಿಮಿತ್ತ ಸಹೋದರರಾಗಿರುವ ಇಸ್ರಾಯೇಲಿನ ಮನೆ ತನದವರೆಲ್ಲರೂ ಗೋಳಾಡಲಿ.
ನಿಮ್ಮ ತಲೆಯ ಮೂಲೆಗಳನ್ನು ದುಂಡಗೆ ಕತ್ತರಿಸಬಾರದು; ಇದಲ್ಲದೆ ನಿಮ್ಮ ಗಡ್ಡದ ಮೂಲೆಯನ್ನು ವಿಕಾರಗೊಳಿಸಬಾರದು.
ನೀವು ನಿಮ್ಮ ದೇವರಾದ ಕರ್ತನ ಮಕ್ಕಳೇ. ನೀವು ಸತ್ತವರಿಗೋಸ್ಕರ ಗಾಯಮಾಡಿ ಕೊಳ್ಳಬೇಡಿರಿ. ನಿಮ್ಮ ಕಣ್ಣುಗಳ ನಡುವೆ ಬೋಳಿಸಿ ಕೊಳ್ಳಬೇಡಿರಿ.
ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.
ಅವನು ಅಡವಿಯಲ್ಲಿರುವ ಕುರುಚಲ ಗಿಡದ ಹಾಗಿರುವನು; ಒಳ್ಳೇದು ಬರುವಾಗ ನೋಡದೆ ಇರುವನು; ನಿವಾಸಿ ಗಳಿಲ್ಲದ ಚೌಳುನೆಲವಾಗಿರುವ ಅರಣ್ಯದ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.
ಏಲಾಮನ್ನು ಅವರ ಶತ್ರುಗಳ ಮುಂದೆಯೂ ಪ್ರಾಣವನ್ನು ಹುಡುಕುವವರ ಮುಂದೆಯೂ ಹೆದರ ಮಾಡುವೆನು; ಅವರ ಮೇಲೆ ಕೇಡನ್ನೂ ನನ್ನ ಕೋಪದ ಉಗ್ರವನ್ನೂ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ; ಅವರನ್ನು ಮುಗಿಸಿ ಬಿಡುವವರೆಗೆ ಕತ್ತಿಯನ್ನು ಅವರ ಹಿಂದೆ ಕಳುಹಿಸುವೆನು.
ಇದಲ್ಲದೆ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳದೆ ಉದ್ದ ಕೂದಲನ್ನು ಬೆಳೆಸದೆ ತಮ್ಮ ತಲೆಕೂದಲುಗಳನ್ನು ಕತ್ತರಿಸಬೇಕು.
ನಿಮ್ಮ ಹಬ್ಬಗಳನ್ನು ದುಃಖಕ್ಕೂ ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು; ಎಲ್ಲರೂ ಸೊಂಟಗಳಿಗೆ ಗೋಣೀತಟ್ಟನ್ನು ಕಟ್ಟಿಕೊಂಡು ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು; ಅದನ್ನು ಒಬ್ಬನೇ ಮಗನಿಗಾಗಿ ದುಃಖಿಸುವಂತೆಯೂ ಅದರ ಅಂತ್ಯವು ಕಹಿಯಾದ ದಿನವಾಗುವಂತೆಯೂ ಮಾಡುವೆನು.
ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.