ಲೇವ್ಯಕಾಂಡ 21:20 · ಕನ್ನಡ ಬೈಬಲ್
ಗೂನು ಬೆನ್ನುಳ್ಳವನು ಗಿಡ್ಡನು ಕಣ್ಣುಗಳಲ್ಲಿ ಕಳಂಕವುಳ್ಳವನು ಹುರುಕುಳ್ಳವನು ತುರಿಯುಳ್ಳವನು ತನ್ನ ಬೀಜಹೊಡೆದವನು
Cross references
ಲೇವ್ಯಕಾಂಡ 22:24
ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವದನ್ನೂ ಕರ್ತನಿಗೆ ಸಮರ್ಪಿಸಬಾರದು. ಅಲ್ಲದೆ ನಿಮ್ಮ ದೇಶದೊಳಗಿರುವ ಅಂಥ ಯಾವ ಸಮರ್ಪಣೆ ಯನ್ನಾ ದರೂ ನೀವು ಸಮರ್ಪಿಸಬಾರದು.
ದ್ವಿತೀಯೋಪದೇಶಕಾಂಡ 23:1
ಬೀಜದಲ್ಲಿ ಗಾಯವುಳ್ಳವನೂ ರಹಸ್ಯಾಂಗ ಕೊಯ್ಯಲ್ಪಟ್ಟವನೂ ಕರ್ತನ ಸಭೆಗೆ ಸೇರ ಬಾರದು.
ದ್ವಿತೀಯೋಪದೇಶಕಾಂಡ 23:2
ಜಾರಳ ಮಗನು ಕರ್ತನ ಸಭೆಗೆ ಸೇರ ಬಾರದು; ಅವನ ಹತ್ತನೇ ತಲಾಂತರದವರೆಗೂ ಕರ್ತನ ಸಭೆಗೆ ಸೇರಬಾರದು.
ಯೆಶಾಯ 56:3
ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.