Home Bibles ಲೇವ್ಯಕಾಂಡ 21:15 · ಕನ್ನಡ ಬೈಬಲ್
ಲೇವ್ಯಕಾಂಡ 21:15 · ಕನ್ನಡ ಬೈಬಲ್

ಇದಲ್ಲದೆ ಅವನು ತನ್ನ ಜನರೊಳಗೆ ತನ್ನ ಸಂತತಿಯನ್ನು ಅಪವಿತ್ರ ಮಾಡಬಾರದು. ಕರ್ತನಾದ ನಾನು ಅವನನ್ನು ಶುದ್ಧೀಕರಿಸುತ್ತೇನೆ.

Cross references

ಆದಿಕಾಂಡ 18:19

ಕರ್ತನು ಅಬ್ರಹಾಮ ನಿಗೆ ಹೇಳಿದ್ದು ನೆರವೇರುವಂತೆ ಅವನು ತನ್ನ ಮಕ್ಕಳಿಗೂ ತರುವಾಯ ಅವನ ಮನೆಯವರಿಗೂ ಆತನ ಮಾರ್ಗವನ್ನು ಕೈಕೊಂಡು ನೀತಿನ್ಯಾಯಗಳನ್ನು ಅನುಸರಿಸಬೇಕೆಂದು ಅಪ್ಪಣೆಕೊಡುವನು ಎಂದು ನನಗೆ ತಿಳಿದದೆ ಎಂದು ಅಂದುಕೊಂಡನು.

ನಿರ್ಗಮಕಾಂಡ 34:16

ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು. ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು.

ಲೇವ್ಯಕಾಂಡ 19:2

ಇಸ್ರಾಯೇಲ್‌ ಮಕ್ಕಳ ಸಭೆಯ ವರೆಲ್ಲರ ಸಂಗಡ ಮಾತನಾಡಿ ಅವರಿಗೆ ಹೀಗೆ ಹೇಳ ಬೇಕು--ನೀವು ಪರಿಶುದ್ಧರಾಗಿರಬೇಕು; ನಿಮ್ಮ ದೇವರಾ ಗಿರುವ ಕರ್ತನಾದ ನಾನು ಪರಿಶುದ್ಧನಾಗಿದ್ದೇನೆ.

ಲೇವ್ಯಕಾಂಡ 20:7

ಆದದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಪರಿಶುದ್ಧರಾಗಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.

ಲೇವ್ಯಕಾಂಡ 21:8

ಅವನು ನಿನ್ನ ದೇವರಿಗೆ ರೊಟ್ಟಿಯನ್ನು ಸಮರ್ಪಿಸುವ ಕಾರಣ ನೀನು ಅವನನ್ನು ಶುದ್ಧೀಕರಿಸ ಬೇಕು, ಅವನು ನನಗೆ ಪರಿಶುದ್ಧನಾಗಿರುವನು. ನಿನ್ನನ್ನು ಶುದ್ಧೀಕರಿಸುವ ಕರ್ತನಾದ ನಾನು ಪರಿಶುದ್ಧನು.

ಲೇವ್ಯಕಾಂಡ 22:16

ಇಲ್ಲವೆ ಅವರು ಪರಿಶುದ್ಧವಾದವು ಗಳನ್ನು ತಿನ್ನುವದರಿಂದ ತಮ್ಮ ಮೇಲೆ ಅತಿಕ್ರಮದ ಅಪರಾಧವನ್ನು ಹೊತ್ತುಕೊಳ್ಳದಿರಲಿ; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ.

ಎಜ್ರಾ 2:62

ಇವರು ವಂಶಾವಳಿಯ ಪ್ರಕಾರ ಲೆಕ್ಕಿಸ ಲ್ಪಟ್ಟವರಲ್ಲಿ ತಮ್ಮ ವಂಶಾವಳಿಯನ್ನು ಹುಡುಕಿದರು. ಅದು ಸಿಕ್ಕದೆಹೋದರಿಂದ ಅವರು ಅಶುದ್ಧ ರೆಂದು ಯಾಜಕ ಉದ್ಯೋಗದಿಂದ ತೆಗೆಯಲ್ಪಟ್ಟರು.

ಎಜ್ರಾ 9:2

ಏನಂದರೆ, ಅವರು ತಮಗೂ ತಮ್ಮ ಕುಮಾರರಿಗೂ ಅವರ ಕುಮಾರ್ತೆಯರನ್ನು ತಕ್ಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ; ನಿಶ್ಚಯವಾಗಿ ಪ್ರಧಾನರ, ಅಧಿಕಾರಸ್ಥರ ಕೈ ಈ ಅಕೃತ್ಯದಲ್ಲಿ ಮುಖ್ಯವಾಗಿದೆ ಎಂದು ಹೇಳಿದರು.

ನೆಹೆಮ್ಯ 13:23

ಆ ದಿವಸಗಳಲ್ಲಿ ಅಮ್ಮೋನು ಮೋವಾಬು ಅಷ್ಡೋದು ಎಂಬ ದೇಶಗಳ ಸ್ತ್ರೀಯರನ್ನು ಮದುವೆ ಮಾಡಿಕೊಂಡ ಯೆಹೂದ್ಯರನ್ನು ಕಂಡೆನು.

ನೆಹೆಮ್ಯ 13:29

ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕ ಸೇವೆಯ ಒಡಂಬ ಡಿಕೆಯನ್ನೂ ಲೇವಿಯರ ಒಡಂಬಡಿಕೆಯನ್ನೂ ಅಶುದ್ಧ ಮಾಡಿದ್ದರಿಂದ ಅವರನ್ನು ನೆನಸು.

ಮಲಾಕಿ 2:11

ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ.

ಮಲಾಕಿ 2:15

ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ,

ರೋಮಾಪುರದವರಿಗೆ 11:16

ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ.

1 ಕೊರಿಂಥದವರಿಗೆ 7:14

ಯಾಕಂದರೆ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ಶುದ್ಧನಾಗಿದ್ದಾನೆ; ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನಲ್ಲಿ ಶುದ್ಧಳಾಗಿದ್ದಾಳೆ. ಹಾಗಲ್ಲ ದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ಪವಿತ್ರರಾಗಿದ್ದಾರೆ.

Interlinear

Choose Theme