Home Bibles ಲೇವ್ಯಕಾಂಡ 21:12 · ಕನ್ನಡ ಬೈಬಲ್
ಲೇವ್ಯಕಾಂಡ 21:12 · ಕನ್ನಡ ಬೈಬಲ್

ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ತನ್ನ ದೇವರ ಅಭಿಷೇಕ ತೈಲದ ಕಿರೀಟವು ಅವನ ತಲೆಯ ಮೇಲೆ ಇರುತ್ತದೆ; ನಾನೇ ಕರ್ತನು.

Cross references

ನಿರ್ಗಮಕಾಂಡ 28:36

ಶುದ್ಧ ಬಂಗಾರದ ತಗಡು ಗಳನ್ನು ಮಾಡಿ ಮುದ್ರೆ ಕೆತ್ತುವ ಪ್ರಕಾರ ಕರ್ತನಿಗೆ ಪರಿಶುದ್ಧ ಎಂದು ಅದರ ಮೇಲೆ ಕೆತ್ತಬೇಕು.

ನಿರ್ಗಮಕಾಂಡ 29:6

ಅವನ ತಲೆಗೆ ಮುಂಡಾಸವನ್ನು ಇಟ್ಟು ಮುಂಡಾಸದ ಮೇಲೆ ಪರಿಶುದ್ಧ ಕಿರೀಟವನ್ನು ಇಟ್ಟು

ಲೇವ್ಯಕಾಂಡ 8:9

ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು ಆ ಮುಂಡಾ ಸದ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ ಪವಿತ್ರ ವಾದ ಕಿರೀಟವನ್ನೂ ಕರ್ತನು ಮೋಶೆಗೆ ಆಜ್ಞಾಪಿಸಿ ದಂತೆಯೇ ಇಟ್ಟನು.

ಲೇವ್ಯಕಾಂಡ 8:30

ಮೋಶೆಯು ಅಭಿಷೇಕ ತೈಲವನ್ನೂ ಯಜ್ಞ ವೇದಿಯ ಮೇಲಿರುವ ರಕ್ತವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ಉಡುಪುಗಳ ಮೇಲೆ ಯೂ ಅವನೊಂದಿಗೆ ಅವನ ಕುಮಾರರ ಮೇಲೆಯೂ ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು ಮತ್ತು ಆರೋನನನ್ನೂ ಅವನ ಉಡುಪುಗಳನ್ನೂ ಅವನೊಂದಿಗೆ ಅವನ ಕುಮಾರರನ್ನೂ ಅವರ ಉಡುಪು ಗಳನ್ನೂ ಪವಿತ್ರಮಾಡಿದನು.

ಲೇವ್ಯಕಾಂಡ 10:7

ಕರ್ತನ ಅಭಿಷೇಕ ತೈಲವು ನಿಮ್ಮ ಮೇಲಿರುವದರಿಂದ ನೀವು ಸಾಯದಂತೆ ಸಭೆಯ ಗುಡಾರದ ಬಾಗಿಲಿನಿಂದ ಹೊರಗೆ ಹೋಗ ಬಾರದು; ಆಗ ಅವರು ಮೋಶೆಯ ಮಾತಿನ ಪ್ರಕಾರವೇ ಮಾಡಿದರು.

ಅಂಕೆಗಳ ಪುಸ್ತಕ 6:6

ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿ ಕೊಂಡ ದಿವಸಗಳೆಲ್ಲಾ ಸತ್ತವನ ಬಳಿಗೆ ಬರಬಾರದು.

ಯೆಶಾಯ 61:1

ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ

ಅಪೋಸ್ತಲರ ಕೃತ್ಯಗಳು 10:38

ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದ ನೆಂಬದನ್ನೂ ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬದನ್ನು ನೀವು ತಿಳಿದಿದ್ದೀರಿ; ಯಾಕಂದರೆ ದೇವರು ಆತನ ಸಂಗಡ ಇದ್ದನು.

Interlinear

Choose Theme