Home Bibles ಲೇವ್ಯಕಾಂಡ 21:1 · ಕನ್ನಡ ಬೈಬಲ್
ಲೇವ್ಯಕಾಂಡ 21:1 · ಕನ್ನಡ ಬೈಬಲ್

ತರುವಾಯ ಕರ್ತನು ಮೋಶೆಗೆ ಹೇಳಿದ್ದೇನಂದರೆ--ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಸತ್ತವರ ನಿಮಿತ್ತವಾಗಿ ಅವನ ಜನರಲ್ಲಿ ಯಾವನೂ ಹೊಲೆಯಾಗಬಾರದು.

Cross references

ಲೇವ್ಯಕಾಂಡ 10:6

ಮೋಶೆಯು ಆರೋನನಿಗೂ ಅವನ ಕುಮಾರ ರಾದ ಎಲ್ಲಾಜಾರ್‌ನಿಗೂ ಈತಾಮಾರ್‌ನಿಗೂ ಹೇಳಿದ್ದೇ ನಂದರೆ--ನೀವು ಸಾಯದಂತೆಯೂ ಕೋಪವು ಜನ ರೆಲ್ಲರ ಮೇಲೆ ಬಾರದಂತೆಯೂ ನಿಮ್ಮ ತಲೆಗಳನ್ನು ಮುಚ್ಚಿಕೊಳ್ಳಿರಿ, ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದು ಕೊಳ್ಳಬೇಡಿರಿ; ಆದರೆ ಕರ್ತನು ಉರಿಸಿದ ನಿಮ್ಮ ಉರಿಯ ನಿಮಿತ್ತ ಸಹೋದರರಾಗಿರುವ ಇಸ್ರಾಯೇಲಿನ ಮನೆ ತನದವರೆಲ್ಲರೂ ಗೋಳಾಡಲಿ.

ಲೇವ್ಯಕಾಂಡ 19:28

ಸತ್ತವರಿ ಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು, ನಿಮ್ಮ ಮೇಲೆ ಯಾವ ಚಿನ್ಹೆಗಳನ್ನೂ ಮುದ್ರಿಸಿಕೊಳ್ಳ ಬಾರದು; ನಾನೇ ಕರ್ತನು.

ಲೇವ್ಯಕಾಂಡ 21:11

ಇಲ್ಲವೆ ಯಾವ ಮೃತ ಶರೀರದ ಬಳಿಗೂ ಹೋಗಬಾರದು; ತನ್ನ ತಂದೆಗಾಗಲಿ ತಾಯಿಗಾಗಲಿ ತನ್ನನ್ನು ಹೊಲೆಮಾಡಿಕೊಳ್ಳಬಾರದು.

ಅಂಕೆಗಳ ಪುಸ್ತಕ 19:11

ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.

ಅಂಕೆಗಳ ಪುಸ್ತಕ 19:14

ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತಾಗ ಅವನ ವಿಷಯವಾದ ಆಜ್ಞೆ ಏನಂದರೆ--ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ ಡೇರೆಯಲ್ಲಿರುವವರೆ ಲ್ಲರೂ ಏಳು ದಿವಸಗಳ ವರೆಗೆ ಅಶುದ್ಧರಾಗಿರಬೇಕು.

ಅಂಕೆಗಳ ಪುಸ್ತಕ 19:16

ಇದಲ್ಲದೆ ಹೊಲದಲ್ಲಿ ಕತ್ತಿ ಯಿಂದ ಕೊಲ್ಲಲ್ಪಟ್ಟವನನ್ನಾದರೂ ಮನುಷ್ಯನ ಎಲುಬ ನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವರೆಲ್ಲರು ಏಳು ದಿವಸ ಅಪವಿತ್ರರಾಗಿರಬೇಕು.

ಯೆಹೆಜ್ಕೇಲ 44:25

ಅವರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆ ತಾಯಿ, ಮಗ, ಮಗಳು, ಸಹೋದರ, ಮತ್ತು ಗಂಡ ಇಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.

ಹೊಶೇಯ 5:1

ಓ ಯಾಜಕರೇ, ಇದನ್ನು ನೀವು ಕೇಳಿರಿ, ಇಸ್ರಾಯೇಲಿನ ಮನೆತನದವರೇ, ನೀವು ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ, ನೀವು ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರ್ಲಾಗಿಯೂ ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.

ಮಲಾಕಿ 2:1

ಈಗ ಓ ಯಾಜಕರೇ, ಈ ಆಜ್ಞೆ ನಿಮಗಾಗಿ ಅದೆ.

ಮಲಾಕಿ 2:4

ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ.

Interlinear

Choose Theme