ನಿನ್ನ ಕಾಣಿಕೆಯು ಬೋಗುಣಿ ಯಲ್ಲಿ ಬೇಯಿಸಿದ ಆಹಾರ ಸಮರ್ಪಣೆಯಾಗಿದ್ದರೆ ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು.
Cross references
ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು; ಅದು ಬೇಯಿಸಲ್ಪಟ್ಟಾಗ ನೀನು ಅದನ್ನು ಒಳಗೆ ತರಬೇಕು; ಬೇಯಿಸಲ್ಪಟ್ಟ ಆಹಾರ ಬಲಿಯ ತುಂಡುಗಳನ್ನು ನೀನು ಕರ್ತನಿಗೆ ಸುವಾಸನೆಗಾಗಿ ಸಮರ್ಪಿಸಬೇಕು.
ಒಲೆಯಲ್ಲಿ ಬೇಯಿಸಿದ್ದೂ ಬಾಂಡ್ಲೆಯಲ್ಲಿಯೂ ಬೋಗುಣಿಯಲ್ಲಿಯೂ ತಯಾ ರಿಸಿದ ಎಲ್ಲಾ ಆಹಾರದ ಅರ್ಪಣೆಯೂ ಸಮರ್ಪಿಸಿದ ಯಾಜಕನದಾಗಿರಬೇಕು.
ಅವನು ಉಪಕಾರಸ್ತುತಿಗಾಗಿ ಅರ್ಪಿಸುವದಾದರೆ, ಉಪಕಾರಸ್ತುತಿ ಬಲಿಯನ್ನು ಹುಳಿಯಿಲ್ಲದ ಎಣ್ಣೆ ಬೆರೆ ಸಿದ ರೊಟ್ಟಿಗಳೊಂದಿಗೆ ಹುಳಿಯಿಲ್ಲದ ಎಣ್ಣೆಹೊಯ್ದ ದೋಸೆಗಳೊಂದಿಗೂ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದರೊಟ್ಟಿಗಳೊಂದಿಗೂ ಸಮರ್ಪಿಸ ಬೇಕು.
ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.