Home Bibles ಲೇವ್ಯಕಾಂಡ 19:5 · ಕನ್ನಡ ಬೈಬಲ್
ಲೇವ್ಯಕಾಂಡ 19:5 · ಕನ್ನಡ ಬೈಬಲ್

ನೀವು ನಿಮ್ಮ ದೇವರಿಗೆ ಸಮಾಧಾನದ ಬಲಿಗಳ ಯಜ್ಞವನ್ನು ಸಮರ್ಪಿಸುವದಾದರೆ ನೀವು ಅದನ್ನು ಸ್ವಇಚ್ಛೆಯಿಂದ ಅರ್ಪಿಸಬೇಕು.

Cross references

ನಿರ್ಗಮಕಾಂಡ 24:5

ಅವನು ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಎತ್ತು ಗಳನ್ನೂ ಅರ್ಪಿಸುವದಕ್ಕಾಗಿ ಇಸ್ರಾಯೇಲ್‌ ಮಕ್ಕಳ ಯೌವನಸ್ಥರನ್ನು ಕಳುಹಿಸಿದನು.

ಲೇವ್ಯಕಾಂಡ 1:3

ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.

ಲೇವ್ಯಕಾಂಡ 3:1

ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.

ಲೇವ್ಯಕಾಂಡ 3:6

ಅವನ ಕಾಣಿಕೆಯು ಸಮಾಧಾನದ ಸಮರ್ಪಣೆಯ ಯಜ್ಞವಾಗಿ ಅದು ತನ್ನ ಹಿಂಡಿನಿಂದಾದ ಕಾಣಿಕೆ ಯಾಗಿದ್ದರೆ ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ದೋಷ ವಿಲ್ಲದ್ದಾಗಿ ಅದನ್ನು ಅವನು ಕರ್ತನಿಗೆ ಸಮರ್ಪಿಸಬೇಕು.

ಲೇವ್ಯಕಾಂಡ 7:16

ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಇಚ್ಛೆಯಾದ ಸಮರ್ಪಣೆ ಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ತಿನ್ನಬೇಕು; ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬೇಕು.

ಲೇವ್ಯಕಾಂಡ 7:18

ತನ್ನ ಸಮಾಧಾನ ಬಲಿ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಸಮರ್ಪಣೆಯಾಗುವದಿಲ್ಲ ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರಿಸಲ್ಪಡುವದಿಲ್ಲ. ಅದು ಹೊಲೆಯಾಗಿರುವದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು.

ಲೇವ್ಯಕಾಂಡ 22:19

ನೀವು ನಿಮ್ಮ ಸ್ವಇಚ್ಛೆಯಿಂದ ಪಶುಗಳೊಳಗೆ ಕುರಿಗಳೊಳಗೆ ಇಲ್ಲವೆ ಮೇಕೆಗಳೊಳಗೆ ದೋಷವಿಲ್ಲದ ಗಂಡಾಗಿರುವದನ್ನು ಅರ್ಪಿಸಬೇಕು;

ಲೇವ್ಯಕಾಂಡ 22:21

ತನ್ನ ಪ್ರಮಾಣವನ್ನು ಪೂರೈಸುವ ಹಾಗೆ ಯಾವನಾದರೂ ಸಮಾಧಾನದ ಬಲಿಗಳ ಯಜ್ಞ ಸಮರ್ಪಣೆಯನ್ನಾಗಲಿ ಪಶುಗಳನ್ನಾಗಲಿ ಕುರಿಗಳ ನ್ನಾಗಲಿ ಉಚಿತವಾದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸುವದಾದರೆ ಅದು ಅಂಗೀಕಾರಕ್ಕೆ ಪರಿಪೂರ್ಣ ವುಳ್ಳದ್ದಾಗಿರಬೇಕು; ಅದರೊಳಗೆ ಯಾವ ದೋಷವು ಇರಬಾರದು.

ಲೇವ್ಯಕಾಂಡ 22:23

ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವ ದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆ ಯಿರುವದಾಗಿದ್ದರೆ ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು; ಆದರೆ ಪ್ರಮಾಣಕ್ಕಾಗಿ ಅದು ಅಂಗೀಕಾರವಾಗುವದಿಲ್ಲ.

ಲೇವ್ಯಕಾಂಡ 22:29

ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು ಸಮರ್ಪಿಸುವಾಗ ನಿಮ್ಮ ಸ್ವಇಷ್ಟದಿಂದ ಅರ್ಪಿಸಿರಿ.

2 ದಿನವೃತ್ತಾಂತ 31:2

ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.

ಯೆಹೆಜ್ಕೇಲ 45:15

ಇಸ್ರಾಯೇಲಿನ ನೀರುಗಳ ಮೇವುಗಳಿಂದ ಮೇದಿ ರುವ ಇನ್ನೂರರೊಳಗೆ ಒಂದು ಕುರಿಮರಿಯನ್ನು ಮಂದೆಯೊಳಗಿಂದ ಅರ್ಪಣೆಗಾಗಿಯೂ ದಹನಬಲಿ ಗಾಗಿಯೂ ಸಮಾಧಾನ ಯಜ್ಞಕ್ಕಾಗಿಯೂ ಅವರಿ ಗೋಸ್ಕರ ಸಮಾಧಾನಕ್ಕಾಗಿ ಅರ್ಪಿಸಬೇಕೆಂದು ದೇವ ರಾದ ಕರ್ತನು ಹೇಳುತ್ತಾನೆ.

ಯೆಹೆಜ್ಕೇಲ 46:2

ಪ್ರಭುವು ಆ ಬಾಗಲಿನ ದ್ವಾರಾಂಗಣ ಮಾರ್ಗವಾಗಿ ಹೊರಗಿ ನಿಂದ ಪ್ರವೇಶಿಸಿ ಬಾಗಲಿನ ಕಂಬದ ಬಳಿಯಲ್ಲಿ ನಿಲ್ಲಬೇಕು, ಆಗ ಯಾಜಕರು ಅವನ ದಹನಬಲಿಯನ್ನು ಸಮಾಧಾನದ ಬಲಿಗಳನ್ನು ಸಿದ್ಧಮಾಡಬೇಕು; ಬಾಗ ಲಿನ ಹೊಸ್ತಿಲಲ್ಲಿ ಆರಾಧಿಸಿ ಹೋಗಬೇಕು. ಆದರೆ ಬಾಗಲು ಸಂಜೆಯವರೆಗೂ ಮುಚ್ಚಲ್ಪಡಬಾರದು;

ಯೆಹೆಜ್ಕೇಲ 46:12

ಪ್ರಧಾನನು ಉಚಿತವಾದ ದಹನಬಲಿಯನ್ನಾಗಲಿ ಸಮಾಧಾನದ ಬಲಿಗಳನ್ನಾಗಲಿ ಉಚಿತವಾಗಿ ಕರ್ತನಿಗೆ ಸಿದ್ಧಮಾಡು ವಾಗ ಅವರು ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲನ್ನು ಅವನಿಗೆ ತೆರೆಯಬೇಕು; ಆಗ ಅವನು ತನ್ನ ದಹನಬಲಿಯನ್ನು ತನ್ನ ಸಮಾಧಾನದ ಬಲಿಗಳನ್ನು ಸಬ್ಬತ್ತು ದಿನದಲ್ಲಿ ಮಾಡಿದ ಹಾಗೆ ಸಿದ್ದಮಾಡಿ ಹೊರಗೆ ಹೋಗಬೇಕು, ಅವನು ಹೊರಗೆ ಹೋದ ಮೇಲೆ ಬಾಗಲನ್ನು ಮುಚ್ಚಬೇಕು.

ಎಫೆಸದವರಿಗೆ 2:13

ಈಗಲಾ ದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸವಿಾಪಸ್ಥ ರಾದಿರಿ.

Interlinear

Choose Theme