ನಿನ್ನ ಮಗಳು ಸೂಳೆಯಾಗುವಂತೆ ವ್ಯಭಿಚಾರಕ್ಕೆ ಬಿಡಬೇಡ; ಬಿಟ್ಟರೆ ಅದರಿಂದ ದೇಶವು ಸೂಳೆತನಕ್ಕೆ ಒಳಪಟ್ಟು, ದೇಶವು ಎಲ್ಲಾ ಕೆಟ್ಟತನದಿಂದ ತುಂಬು ವದು.
Cross references
ಅವರು ವ್ಯಭಿಚಾರಿಯನ್ನು ಇಲ್ಲವೆ ಅಪವಿತ್ರಳನ್ನು ಹೆಂಡತಿಯಾಗಿ ತೆಗೆದುಕೊಳ್ಳಬಾರದು; ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯನ್ನು ತೆಗೆದು ಕೊಳ್ಳಬಾರದು; ಅವನು ತನ್ನ ದೇವರಿಗೆ ಪರಿಶುದ್ಧ ನಾಗಿದ್ದಾನೆ.
ಇಸ್ರಾಯೇಲಿನ ಕುಮಾರ್ತೆಯರಲ್ಲಿ ಸೂಳೆ ಇರ ಬಾರದು; ಇಸ್ರಾಯೇಲಿನ ಕುಮಾರರಲ್ಲಿ ಪುರುಷ ಸಂಗದವನು ಇರಬಾರದು.
ಸೂಳೆಯ ಕೂಲಿಯನ್ನು ಇಲ್ಲವೆ ನಾಯಿಯ ಕ್ರಯವನ್ನು ಯಾವದೊಂದು ಪ್ರಮಾಣವಾಗಿ ನಿನ್ನ ದೇವರಾದ ಕರ್ತನ ಮನೆಗೆ ತರಬಾರದು. ಅವೆರಡು ನಿನ್ನ ದೇವರಾದ ಕರ್ತನಿಗೆ ಅಸಹ್ಯ.
ನನ್ನ ಜನರು ಮರದ ತುಂಡುಗಳಿಗೆ ಆಲೋಚನೆ ಕೇಳುತ್ತಾರೆ; ಅವರ ಕೋಲು ಅವರಿಗೆ ತಿಳಿಸುತ್ತದೆ. ವ್ಯಭಿಚಾರದ ಆತ್ಮಗಳು ಅವರನ್ನು ತಪ್ಪಿಸಿಬಿಟ್ಟಿದೆ; ಅವರು ತಮ್ಮ ದೇವರ ಕೈಕೆಳಗಿರದೆ ವ್ಯಭಿಚಾರ ಮಾಡಿದ್ದಾರೆ.
ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳನ್ನು ನಾನು ತೆಗೆದುಬಿಟ್ಟು ಸೂಳೆಯ ಅಂಗಗಳಾಗ ಮಾಡಬಹುದೋ? ಹಾಗೆ ಎಂದಿಗೂ ಆಗಬಾರದು.