Home Bibles ☰ Books ಲೇವ್ಯಕಾಂಡ 19:26 · ಕನ್ನಡ ಬೈಬಲ್
ಲೇವ್ಯಕಾಂಡ 19:26 · ಕನ್ನಡ ಬೈಬಲ್

ನೀವು ರಕ್ತ ದೊಂದಿಗೆ ಯಾವದನ್ನೂ ತಿನ್ನಬಾರದು; ಇದಲ್ಲದೆ ಮಂತ್ರವನ್ನು ಉಪಯೋಗಿಸಬಾರದು, ಶಕುನಗಳನ್ನು ನೋಡಬಾರದು.

Cross references

ನಿರ್ಗಮಕಾಂಡ 7:11

ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು.

ನಿರ್ಗಮಕಾಂಡ 8:7

ಆದರೆ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿ ಕಪ್ಪೆಗಳನ್ನು ಐಗುಪ್ತದೇಶದ ಮೇಲೆ ಬರಮಾಡಿದರು.

ಲೇವ್ಯಕಾಂಡ 3:17

ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು.

ಲೇವ್ಯಕಾಂಡ 7:26

ಇದಲ್ಲದೆ ನೀವು ಯಾವತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾ ಗಲಿ, ಪ್ರಾಣಿಯದಾಗಲಿ, ನಿಮ್ಮ ಯಾವ ನಿವಾಸಗಳ ಲ್ಲಿಯೂ ತಿನ್ನಬಾರದು.

ಲೇವ್ಯಕಾಂಡ 17:10

ಇದಲ್ಲದೆ ಇಸ್ರಾಯೇಲ್‌ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.

ದ್ವಿತೀಯೋಪದೇಶಕಾಂಡ 12:23

ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.

ದ್ವಿತೀಯೋಪದೇಶಕಾಂಡ 18:10

ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ

ದ್ವಿತೀಯೋಪದೇಶಕಾಂಡ 18:11

ಗಾರಡಿಗಾರನೂ ಯಕ್ಷಿಣಿಗಾರನೂ ಮಂತ್ರಜ್ಞನೂ ಸತ್ತವರ ಹತ್ತಿರ ವಿಚಾರಿಸುವವನೂ ನಿನ್ನಲ್ಲಿ ಸಿಕ್ಕಬಾರದು.

1 ಸಮುವೇಲ 15:23

ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.

2 ಅರಸುಗಳು 17:17

ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.

2 ಅರಸುಗಳು 21:6

ಅವನು ತನ್ನ ಮಗನನ್ನು ಬೆಂಕಿಯಲ್ಲಿ ದಾಟುವಂತೆ ಮಾಡಿದನು; ಮೇಘ ಮಂತ್ರ ಗಳನ್ನೂ ಸರ್ಪಮಂತ್ರಗಳನ್ನೂ ಮಾಡಿದನು; ಯಕ್ಷಿಣಿ ಗಾರರ ಬಳಿಯಲ್ಲೂ ಮಂತ್ರಜ್ಞರ ಬಳಿಯಲ್ಲೂ ವಿಚಾರಿ ಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸಲು ಆತನ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿದನು.

2 ದಿನವೃತ್ತಾಂತ 33:6

ಬೆನ್‌ ಹಿನ್ನೋಮ್‌ ಮಗನ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬೆಂಕಿ ದಾಟುವಂತೆ ಮಾಡಿದನು; ಮೇಘಮಂತ್ರ ಸರ್ಪ ಮಂತ್ರಗಳನ್ನೂ ಮಾಟವನ್ನು ಮಾಡಿದನು; ಯಕ್ಷಿಣಿ ಗಾರರ ಮಂತ್ರಗಾರರ ಬಳಿಯಲ್ಲೂ ವಿಚಾರಿಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸುವಂತೆ ಆತನ ಸಮ್ಮುಖ ದಲ್ಲಿ ಬಹಳವಾಗಿ ಕೆಟ್ಟತನವನ್ನು ಮಾಡಿದನು.

ಯೆರೆಮಿಯ 10:2

ಯೆಹೂದದ ಮನುಷ್ಯರ ಸಂಗಡಲೂ ಯೆರೂಸಲೇಮಿನ ನಿವಾಸಿಗಳ ಸಂಗ ಡಲೂ ಮಾತನಾಡಿ ಅವರಿಗೆ ನೀನು ಹೇಳಬೇಕಾದ ದ್ದೇನಂದರೆ--

Interlinear

Choose Theme