Home Bibles ಲೇವ್ಯಕಾಂಡ 19:14 · ಕನ್ನಡ ಬೈಬಲ್
ಲೇವ್ಯಕಾಂಡ 19:14 · ಕನ್ನಡ ಬೈಬಲ್

ಕಿವುಡನನ್ನು ಶಪಿಸಬಾರದು; ಕುರು ಡನು ಮುಗ್ಗರಿಸುವಂತೆ ಅವನ ಮುಂದೆ ಕಲ್ಲನ್ನು ಇಡ ಬಾರದು, ಆದರೆ ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.

Cross references

ಆದಿಕಾಂಡ 42:18

ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ--ಇದನ್ನು ಮಾಡಿ ಬದುಕಿರಿ, ಯಾಕಂದರೆ ನಾನು ದೇವರಿಗೆ ಭಯಪಡುವವನಾ ಗಿದ್ದೇನೆ.

ಲೇವ್ಯಕಾಂಡ 19:32

ನರೇಕೂದಲಿನವನ ಮುಂದೆ ಎದ್ದು ನಿಂತು ಕೊಳ್ಳಬೇಕು; ಮುದುಕನ ಸಮ್ಮುಖವನ್ನು ಗೌರವಿಸು; ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.

ಲೇವ್ಯಕಾಂಡ 25:17

ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.

ದ್ವಿತೀಯೋಪದೇಶಕಾಂಡ 27:18

ಕುರುಡನನ್ನು ದಾರಿ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.

ನೆಹೆಮ್ಯ 5:15

ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ.

ಕೀರ್ತನೆಗಳು 111:10

ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ.

ರೋಮಾಪುರದವರಿಗೆ 12:14

ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ; ಶಪಿಸದೆ ಆಶೀ ರ್ವದಿಸಿರಿ.

ರೋಮಾಪುರದವರಿಗೆ 14:13

ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ.

1 ಕೊರಿಂಥದವರಿಗೆ 8:8

ಆದರೆ ಆಹಾರವು ನಮ್ಮನ್ನು ದೇವರಿಗೆ ಮೆಚ್ಚಿಕೆಯಾದವರನ್ನಾಗಿ ಮಾಡಲಾರದು; ಯಾಕಂದರೆ ನಾವು ತಿಂದರೆ ನಮ ಗೇನೂ ಹೆಚ್ಚಾಗುವದಿಲ್ಲ; ಇಲ್ಲವೆ ನಾವು ತಿನ್ನದಿದ್ದರೆ ನಮಗೇನೂ ಕಡಿಮೆಯಿಲ್ಲ.

1 ಕೊರಿಂಥದವರಿಗೆ 10:32

ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.

1 ಪೇತ್ರ 1:17

ಪ್ರತಿಯೊಬ್ಬನ ಕೆಲಸವನ್ನು ನೋಡಿ ಪಕ್ಷಪಾತ ವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆ ಯೆಂದು ಬೇಡಿಕೊಳ್ಳುವವರಾಗಿರಲಾಗಿ ನಿಮ್ಮ ಪ್ರವಾಸ ಕಾಲವನ್ನು ಭಯದಿಂದ ಕಳೆಯಿರಿ.

1 ಪೇತ್ರ 2:17

ಎಲ್ಲರನ್ನು ಸನ್ಮಾನಿ ಸಿರಿ, ಸಹೋದರರನ್ನು ಪ್ರೀತಿಸಿರಿ, ದೇವರಿಗೆ ಭಯ ಪಡಿರಿ, ಅರಸನನ್ನು ಸನ್ಮಾನಿಸಿರಿ.

ಪ್ರಕಟನೆ 2:14

ಆದರೂ ನಿನಗೆ ವಿರೋಧವಾದ ಕೆಲವು ವಿಷಯಗಳು ನನಗಿವೆ. ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ ಪದಾರ್ಥಗಳನ್ನು ತಿನ್ನುವ ದಕ್ಕೂ ಜಾರತ್ವ ಮಾಡುವದಕ್ಕೂ ಇಸ್ರಾಯೇಲಿನ ಮಕ್ಕಳ ಮುಂದೆ ಮುಗ್ಗರಿಸುವ ಬಂಡೆಯನ್ನು ಹಾಕ ಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ಬೋಧನೆಯನ್ನು

Interlinear

Choose Theme