Home Bibles ಲೇವ್ಯಕಾಂಡ 18:16 · ಕನ್ನಡ ಬೈಬಲ್
ಲೇವ್ಯಕಾಂಡ 18:16 · ಕನ್ನಡ ಬೈಬಲ್

ನೀನು ನಿನ್ನ ಸಹೋ ದರನ ಹೆಂಡತಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು; ಅದು ನಿನ್ನ ಸಹೋದರನ ಬೆತ್ತಲೆತನ.

Cross references

ಲೇವ್ಯಕಾಂಡ 20:21

ಇದಲ್ಲದೆ ಒಬ್ಬನು ತನ್ನ ಸಹೋದರನ ಹೆಂಡತಿಯನ್ನು ತೆಗೆದುಕೊಂಡರೆ ಅದು ಅಶುದ್ಧ ವಾದದ್ದು; ಅವನು ತನ್ನ ಸಹೋದರನ ಬೆತ್ತಲೆ ತನವನ್ನು ಕಾಣುವಂತೆ ಮಾಡಿದ್ದಾನೆ; ಅವರು ಮಕ್ಕಳಿ ಲ್ಲದವರಾಗುವರು.

ದ್ವಿತೀಯೋಪದೇಶಕಾಂಡ 25:5

ಸಹೋದರರು ಕೂಡಿ ವಾಸಮಾಡುವಾಗ ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ ಆ ಸತ್ತವನ ಹೆಂಡತಿ ಮನೆ ಬಿಟ್ಟು ಅನ್ಯನ ಹೆಂಡತಿಯಾಗಬಾರದು; ಗಂಡನ ಸಹೋದರನು ಅವಳ ಬಳಿಗೆ ಬಂದು ಅವಳನ್ನು ಹೆಂಡತಿಯಾಗಿ ತಕ್ಕೊಂಡು ಗಂಡನ ಸಹೋದರನಿಗೆ ತಕ್ಕ ಹಾಗೆ ಅವಳಿಗೆ ನಡಿಸಬೇಕು.

ಮತ್ತಾಯ 14:3

ಯಾಕಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿ ಯೋಹಾನನನ್ನು ಹಿಡಿದು ಕಟ್ಟಿ ಸೆರೆಯಲ್ಲಿ ಹಾಕಿದ್ದನು.

ಮತ್ತಾಯ 22:24

ಬೋಧ ಕನೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.

ಮಾರ್ಕ 6:17

ಯಾಕಂ ದರೆ ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿ ಹೆರೋದನು ತಾನೇ ಯೋಹಾನನನ್ನು ಕರೇ ಕಳುಹಿಸಿ ಹಿಡಿದು ಕಟ್ಟಿ ಅವನನ್ನು ಸೆರೆಯಲ್ಲಿ ಹಾಕಿದ್ದನು; ಯಾಕಂದರೆ ಅವನು ಅವಳನ್ನು ವಿವಾಹ ಮಾಡಿಕೊಂಡಿದ್ದನು.

ಮಾರ್ಕ 12:19

ಬೋಧಕನೇ, ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ತಕ್ಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು ಎಂದು ಮೋಶೆಯು ನಮಗೆ ಬರೆದಿರು ತ್ತಾನಷ್ಟೆ.

ಲೂಕ 3:19

ಆದರೆ ಚತುರಾಧಿಪತಿಯಾದ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡ ತಿಯಾದ ಹೆರೋದ್ಯಳಿಗಾಗಿಯೂ ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿಯೂ ಯೋಹಾ ನನು ಅವನನ್ನು ಗದರಿಸಿದ್ದರಿಂದ

Interlinear

Choose Theme