ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ.ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.
Cross references
ಭೂಮೃಗಗಳ, ಪಕ್ಷಿಗಳ, ಪ್ರತಿಯೊಂದು ಜಲ ಜೀವಿ, ಭೂಮಿಯ ಮೇಲೆ ಹರಿದಾಡುವ ಪ್ರತಿ ಯೊಂದು ಕ್ರಿಮಿಯ ನಿಯಮವು ಇದೇ.ಅಶುದ್ಧ ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನುವಂತ ಪಶು ತಿನ್ನಬಾರದ ಪಶುಗಳ ವ್ಯತ್ಯಾಸವನ್ನೂ ಹೀಗೆ ನೀವು ಮಾಡುವಿರಿ.
ಉಣ್ಣೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನ ಹೊಕ್ಕಿನ ಮತ್ತು ಚರ್ಮದಿಂದಾದ ಯಾವದ ರಿಂದಾಗಲಿ ಕುಷ್ಠವ್ಯಾಧಿಯವಿಷಯದಲ್ಲಿ ಅದನ್ನು ಶುದ್ಧವೆಂದು ಅಶುದ್ಧವೆಂದು ನುಡಿಯುವದಕ್ಕೆ ನ್ಯಾಯ ವಿಧಿಯು ಇದೇ.
ಕುಷ್ಠ ರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ: ಅವನು ಯಾಜಕನ ಬಳಿಗೆ ತರಲ್ಪಡಬೇಕು.
ಕುಷ್ಠರೋಗವುಳ್ಳವನಿಗಾಗಿ ಶುದ್ಧತೆಮಾಡಿಸಿಕೊಳ್ಳುವದರಲ್ಲಿ ಕೈಯಿಂದ ಆಗದಿರುವ ವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
ಎಲ್ಲಾ ವಿಧವಾದ ಕುಷ್ಠವ್ಯಾಧಿಗೂ ಇಸಬಿಗೂ
ರೋಷಕ್ಕೆ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ
ಇದು ನಾಜೀರನ ನಿಯಮವು: ಪ್ರತ್ಯೇಕಿಸಲ್ಪಟ್ಟ ಅವನ ದಿವಸಗಳು ಪೂರ್ಣವಾದ ಮೇಲೆ ಅವನನ್ನು ಸಭೆಯ ಗುಡಾರದ ಬಾಗಲಿನ ಬಳಿಗೆ ತರಬೇಕು.
ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತಾಗ ಅವನ ವಿಷಯವಾದ ಆಜ್ಞೆ ಏನಂದರೆ--ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ ಡೇರೆಯಲ್ಲಿರುವವರೆ ಲ್ಲರೂ ಏಳು ದಿವಸಗಳ ವರೆಗೆ ಅಶುದ್ಧರಾಗಿರಬೇಕು.
ಇದು ಆ ಆಲಯದ ನ್ಯಾಯಪ್ರಮಾಣವಾಗಿದೆ --ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧ ವಾಗಿದೆ. ಇಗೋ, ಇದೇ ಆ ಆಲಯದ ನ್ಯಾಯ ಪ್ರಮಾಣವಾಗಿದೆ.